ಮುಂಬೈ: ಆಕ್ಸಿಸ್ ಬ್ಯಾಂಕ್ ಫೌಂಡೇಷನ್ (ಎಬಿಎಫ್) ಸಹಪೀಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಹೆರಿಟೇಜ್ ವಾಕ್ಸ್ ಯೋಜನೆಗೆ ಬೆಂಬಲ ನೀಡಿದೆ.
ಸಹಪೀಡಿಯಾ ಭಾರತದ ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಆನ್ ಲೈನ್ ಎನ್ ಸೈಕ್ಲೋಪಿಡಿಯಾ ಆಗಿದ್ದು, ಆಕ್ಸಿಸ್ ಬ್ಯಾಂಕ್ ಫೌಂಡೇಶನ್ (ಎಬಿಎಫ್) ಯೋಜನೆಯಿಂದ ಭಾರಾತದ ಪಾರಂಪರಿಕ ನಗರಗಳನ್ನು ಹೆಚ್ಚು ತಿಳಿಯಲು ಅವಕಾಶವಾಗಲಿದೆ.
ಸಹಪೀಡಿಯಾ ಆಯೋಜಿಸಿರುವ ಸುಮಾರು 200 ಗೈಡೆಡ್ ವಾಕಿಂಗ್ ಟೂರ್ಸ್ ನ್ನು ಎಬಿಎಫ್ ತನ್ನ ಆಕ್ಸಿಸ್ ಕೇರ್ಸ್ ಪ್ರೋಗ್ರಾಂ ಮೂಲಕ ಬೆಂಬಲಿಸಲ್ಲಿದ್ದು, ಅರ್ಧದಷ್ಟು ವಿಕಲಾಂಗತೆಗಳು ಮತ್ತು ದುರ್ಬಲ ಮಕ್ಕಳಿಗಾಗಿ ಉಪಯೋಗವಾಗಲಿದೆ.
ಹೆರಿಟೇಜ್ ವಾಕ್ ಪ್ರತಿ ತಿಂಗಳು ವಿವಿಧ ಸ್ಥಳಗಳಲ್ಲಿ ಆಯೋಜಿಸಲಾಗುವ 8-10 ಟೂರ್ ಗಳ ಮುಂದುವರೆದ ಯೋಜನೆಯಾಗಿದೆ ಎಂದು ಸೈಕ್ಲೋಪಿಡಿಯಾ ಹೇಳಿದೆ.