ನವದೆಹಲಿ: ಇಟಾಲಿಯ ಪ್ರಧಾನಿ ಪಾವೊಲೊ ಗೆಂಟಿಲೋನಿ ಅ.30 ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಭಾರತ-ಇಟಾಲಿ ನಡುವೆ ದ್ವಿಪಕ್ಷೀಯ ಸಂಬಂಧ ವೃದ್ಧಿ ಮಾಡುವ ಗುರಿ ಇದೆ.
ಇಟಾಲಿಯ ಮಾಜಿ ಪ್ರಧಾನಿ ರೊಮಾನೋ ಪ್ರೊಡಿ 2007 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು ಇದಾದ ನಂತರ ಭಾರತಕ್ಕೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಪಾವೊಲೊ ಗೆಂಟಿಲೋನಿ ಆಗಿದ್ದಾರೆ.
ದಶಕದ ನಂತರ ಇಟಾಲಿ ಪ್ರಧಾನಿಯೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿದ್ದು, ಭಾರತ- ಇಟಾಲಿ ನಡುವಿನ ದ್ವಿಪಕ್ಷೀಯ ಸಂಬಂಧ, ಆರ್ಥಿಕ ಸಂಬಂಧ ಗಟ್ಟಿಯಾಗುವ ನಿರೀಕ್ಷೆ ಇದೆ ಎಂದು ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.