ವಿಜಯ್ ರುಪಾನಿ
ವಿಜಯ್ ರುಪಾನಿ

ಮಹಿಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಶಿಶುಗಳ ಸಾವು; ತಪ್ಪಿತಸ್ಥರ ವಿರುದ್ಧ ಕಠಣ ಕ್ರಮ: ಸಿಎಂ

ಗುಜರಾತ್ ನ ಮಹಿಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿರುವ ನವಜಾತ ಶಿಶುಗಳ ಸಾವು ಪ್ರಕರಣದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ..
Published on
ಅಹಮದಾಬಾದ್: ಗುಜರಾತ್ ನ ಮಹಿಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿರುವ ನವಜಾತ ಶಿಶುಗಳ ಸಾವು ಪ್ರಕರಣದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಹೇಳಿದ್ದಾರೆ. 
ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸಮತಿಯೊಂದನ್ನು ರಚಿಸಿದ್ದು ಕೂಡಲೇ ವರದಿ ನೀಡುವಂತೆ ಸೂಚಿಸಲಾಗಿದೆ. ಇನ್ನು ವರದಿಯನ್ವಯ ತಪ್ಪಿತಸ್ಥರ ವಿರುದ್ಧ ಕಠಣ ಕ್ರಮಕೈಗೊಳ್ಳುವುದಾಗಿ ವಿಜಯ್ ರುಪಾನಿ ಹೇಳಿದ್ದಾರೆ. 
ಗುಜರಾತ್ ನ ಮಹಿಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ ಬರೊಬ್ಬರಿ 9 ನವಜಾತ ಶಿಶುಗಳ ಸಾವನ್ನಪ್ಪಿದ್ದವು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಈ ಸಾವುಗಳು ಸಂಭವಿಸಿದ್ದವು. ಈ ಪೈಕಿ ಐದು ಶಿಶುಗಳನ್ನು ಮಹಿಸಾಗರ ಜಿಲ್ಲೆಯ ಲೂನಾವಾಡ ಆಸ್ಪತ್ರೆ, ಸುರೇಂದ್ರನಗರ, ಗಾಂಧಿನಗರ ಜಿಲ್ಲೆಯ ಮನ್ಸಾ, ಅಹ್ಮದಾಬಾದ್ ಜಿಲ್ಲೆಯ ವಿರಾಮಗಾಮ ಹಾಗೂ ಸಬರಕಾಂತ ಜಿಲ್ಲೆ  ಹಿಮ್ಮತ್‌ ನಗರದಿಂದ ಸ್ಥಳಾಂತರಿಸಲಾಗಿತ್ತು. ನಾಲ್ಕು ಮಕ್ಕಳು ಇದೇ ಸರ್ಕಾರಿ ಆಸ್ಪತ್ರೆಯಲ್ಲಿ ಜನ್ಮ ತಾಳಿದ್ದವು.
ಈ ಎಲ್ಲ ಒಂಬತ್ತು ಮಕ್ಕಳೂ ಕಡಿಮೆ ತೂಕದ ಮಕ್ಕಳು ಎಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಎಂ.ಎಂ.ಪ್ರಭಾಕರ್ ಹೇಳಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಶಿಶುಗಳನ್ನು ನಮ್ಮ ಆಸ್ಪತ್ರೆಗೆ ಕಳುಹಿಸಲಾಗಿತ್ತು. ವೈದ್ಯರು ಕೂಡ ಸೂಕ್ತ  ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಕ್ಕಳು ಸಾವನ್ನಪ್ಪಿವೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಲೂನಾವಾಡದಿಂದ ತಂದ ಒಂದು ಮಗು ಕೇವಲ 1.1 ಕೆ.ಜಿ. ತೂಕ ಹೊಂದಿತ್ತು. 130 ಕಿಲೋಮೀಟರ್ ದೂರದಿಂದ ಆ ಶಿಶುವನ್ನು ತರಲಾಗಿತ್ತು. ವಾಸ್ತವವಾಗಿ ಅಲ್ಲೇ ಪಕ್ಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಿತ್ತಾದರೂ ತೀರಾ ಪರಿಸ್ಥಿತಿ ಕೈಮೀರಿದಾಗ ಈ ಆಸ್ಪತ್ರೆಗೆ ಕಳುಹಿಸುವ ಪ್ರಕರಣಗಳು ಹೊಸದಲ್ಲ ಎಂದು ಅವರು ಸ್ಪಷ್ಟಪಡಿಸಿದರು. ವೈದ್ಯರ ಗೈರಿನಿಂದಾಗಿ ಮಕ್ಕಳು ಮೃತಪಟ್ಟಿವೆ ಎಂಬ ವರದಿಗಳನ್ನು ಅಲ್ಲಗಳೆದ ಅವರು, ಶನಿವಾರ ಎಲ್ಲ ವೈದ್ಯರು ಮತ್ತು ದಾದಿಯರು ಕರ್ತವ್ಯದಲ್ಲಿದ್ದರು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com