ಲೈಂಗಿಕ ಸಿಡಿ ಪ್ರಕರಣ: ಸಿಬಿಐ ಗೆ ಪತ್ರ ಬರೆದ ಛತ್ತೀಸ್ ಘಡ ಮುಖ್ಯಮಂತ್ರಿ

ಛತ್ತೀಸ್ಗಢದ ಸಚಿವ ರಾಜೇಶ್ ಮುನಾಟ್ ವಿರುದ್ಧದ ಆರೋಪಗಳ ತನಿಖೆಯನ್ನು ನಡೆಸುವಂತೆ ಛತ್ತೀಸ್ ಘಡ ಮುಖ್ಯಮಂತ್ರಿ ರಮಣ್ ಸಿಂಗ್ ಕೇಂದ್ರೀಯ ತನಿಖಾ ದಳ (ಸಿಬಿಐ) ಗೆ ಪತ್ರ ಬರೆದಿದ್ದಾರೆ.
ರಮಣ್ ಸಿಂಗ್
ರಮಣ್ ಸಿಂಗ್
ರಾಯ್ ಪುರ್: ಛತ್ತೀಸ್ಗಢದ ಸಚಿವ ರಾಜೇಶ್ ಮುನಾಟ್ ವಿರುದ್ಧದ ಆರೋಪಗಳ ತನಿಖೆಯನ್ನು ನಡೆಸುವಂತೆ ಛತ್ತೀಸ್ ಘಡ ಮುಖ್ಯಮಂತ್ರಿ ರಮಣ್ ಸಿಂಗ್ ಕೇಂದ್ರೀಯ ತನಿಖಾ ದಳ (ಸಿಬಿಐ) ಗೆ ಪತ್ರ ಬರೆದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಂಗ್, ಚತ್ತೀಸ್ ಘಡ ಸರ್ಕಾರದ ಹೆಸರು ಕೆಡಿಸುವ ಉದ್ದೇಶದಿಂದ ಕಾಂಗ್ರೆಸ್ ಈ ಯೊಜನೆ ರೂಪಿಸಿದೆ ಎಂದರು.
"ಕಾಂಗ್ರೆಸ್ ಈ ಮಟ್ಟಕ್ಕೆ ಇಳಿಯಲಿದೆ ಎಂಬ ಕಲ್ಪನೆಯೂ ನಮಗಿರಲಿಲ್ಲ. ಈ ವಿಷಯವನ್ನು ತನಿಖೆ ಮಾಡಲು ನಾನು ಸಿಬಿಐಗೆ ಪತ್ರವೊಂದನ್ನು ಬರೆದಿದ್ದೇನೆ. ಆದ್ದರಿಂದ ತಮ್ಮ ರಾಜಕೀಯ ಲಾಭಕ್ಕಾಗಿ ಯಾರೊಬ್ಬರ ತೆಗಳಲು ಭವಿಷ್ಯದಲ್ಲಿ ಇತರ ಪಕ್ಷಗಳು ಇಂತಹಾ ಮಾರ್ಗವನ್ನು ಬಳಸುವುದಿಲ್ಲ." ಸಿಂಗ್ ಹೇಳಿದರು.
ಏತನ್ಮಧ್ಯೆ, ನಿನ್ನೆ, ಹಿರಿಯ ಪತ್ರಕರ್ತ ವಿನೋದ್ ವರ್ಮಾ ಅವರನ್ನು ಮೂರು ದಿನಗಳ ಮಟ್ಟಿಗೆ ವಿಚಾರಣೆಗಾಗಿ ರಾಯ್ ಪುರ್ ನ ಮಾನಾ ಪೊಲೀಸ್ ಠಾಣೆಗೆ ಕರೆದೊಯ್ದರು.
ಅ.27 ರಂದು ವಿನೋದ್ ವರ್ಮಾರನ್ನು ಛತ್ತಿಶ್ ಘಡ  ಪೊಲೀಸರು ಬ್ಲ್ಯಾಕ್ ಮೇಲ್ ಆರೋಪದ ಮೇಲೆ ಬಂಧಿಸಿದ್ದರು. ಉತ್ತರಪ್ರದೇಶದ ಘಾಜಿಯಾಬಾದ್ ನ ಅವರ ನಿವಾಸದಿಂದ ವಿನೋದ್ ವರ್ಮಾ ಅವರನ್ನು ಬಂಧಿಸಿ ಕರೆದೊಯ್ಯಲಾಗಿತ್ತು..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com