ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಎಚ್.ಇ. ಸಲಾಹದ್ದೀನ್ ರಬ್ಬಾನಿ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ವಿದೇಶಾಂಗ ಸಚಿವ ಎಚ್.ಇ.ಜಾವಾದ್ ಝರೀಫ್, ಇಂದು ಜಂಟಿ ವೀಡಿಯೋ ಕಾನ್ಫರೆನ್ಸ್ ಮೂಲಕ, ಭಾರತದಿಂದ ಅಫ್ಘಾನಿಸ್ತಾನಕ್ಕೆ ಇದೇ ಮೊದಲ ಬಾರಿಗೆ ಇರಾನ್ ನ ಚಬಹಾರ್ ಬಂದರಿನ ಮೂಲಕ ಗೋಧಿ ಸಾಗಾಣಿಕೆಗೆ ಚಾಲನೆ ನೀಡಿದರು.