ಸರ್ದಾರ್ ಪಟೇಲರ ಕೊಡುಗೆಯನ್ನು ಕಾಂಗ್ರೆಸ್ ಎಂದಿಗೂ ತಿರಸ್ಕರಿಸಿರಲಿಲ್ಲ: ಶೀಲಾ ದೀಕ್ಷಿತ್

ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್'ರ ಕೊಡುಗೆಗಳನ್ನು ಕಾಂಗ್ರೆಸ್ ಎಂದಿಗೂ ತಿರಸ್ಕರಿಸಿರಲಿಲ್ಲ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಮಂಗಳವಾರ ಹೇಳಿದ್ದಾರೆ...
ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್
ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್
ನವದೆಹಲಿ: ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್'ರ ಕೊಡುಗೆಗಳನ್ನು ಕಾಂಗ್ರೆಸ್ ಎಂದಿಗೂ ತಿರಸ್ಕರಿಸಿರಲಿಲ್ಲ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಮಂಗಳವಾರ ಹೇಳಿದ್ದಾರೆ. 
ಸರ್ದಾರ್ ಪಟೇಲ್ ಜನ್ಮದಿನ ನಿಮಿತ್ತ 'ರನ್ ಫಾರ್ ಯೂನಿಟಿ'ಗೆ ಚಾಲನೆ ನೀಡಿ ಮಾತನಾಡಿದ್ದ ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರು, ಈ ಹಿಂದೆ ಇದ್ದ ಸರ್ಕಾರಗಳು ಉಕ್ಕಿನ ಮನುಷ್ಯ ಸರ್ದಾರ್ ಪಟೇಲರ ಪರಂಪರೆಯನ್ನು ನಿರ್ಲಕ್ಷಿಸಿದ್ದವು ಎಂದು ಹೇಳಿದ್ದರು. 
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶೀಲಾ ದೀಕ್ಷಿತ್ ಅವರು, ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್'ರ ಕೊಡುಗೆಗಳನ್ನು ಕಾಂಗ್ರೆಸ್ ಎಂದಿಗೂ ತಿರಸ್ಕರಿಸಿರಲಿಲ್ಲ. ಇತಿಹಾಸ ತಿಳಿದವರು ಹಾಗೂ ಓದಿರುವವರು ಪ್ರಧಾನಿ ಮೋದಿಯವರ ಹೇಳಿಕೆಯನ್ನು ಯಾರೂ ನಂಬುವುದಿಲ್ಲ ಎಂದು ಹೇಳಿದ್ದಾರೆ. 
ಕಾಂಗ್ರೆಸ್ ಎಂದಿಗೂ ಪಟೇಲರ ಪರಂಪರೆಯನ್ನು ತಿರಸ್ಕರಿಸರಲಿಲ್ಲ. ಪ್ರಧಾನಿ ಮೋದಿಯವರ ಹೇಳಿಕೆ ತಪ್ಪು. ದೇಶದ ಸ್ವಾತಂತ್ರ್ಯಕ್ಕೆ ಸರ್ದಾರ್ ಪಟೇಲರು ಹಾಗೂ ನೆಹರೂ ಇಬ್ಬರೂ ಕಾರಣಕರ್ತರಾಗಿದ್ದಾರೆ. ಇತಿಹಾಸ ಓದಿರುವವರಾಗರೂ ಮೋದಿಯವರ ಹೇಳಿಕೆಯನ್ನು ನಂಬುವುದಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com