ನವದೆಹಲಿ: ಅತ್ಯಾಚಾರ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿರುವ ನ್ಯಾಯಾಲಯ, ಪುರುಷರ ಘನತೆ ಗೌರವಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಹೇಳಿದೆ.
ಮಹಿಳೆಯರ ಘನತೆ, ಗೌರವಗಳ ಬಗ್ಗೆ ಎಲ್ಲರೂ ಮಾತನಾಡುತ್ತಾರೆ, ಹೋರಾಡುತ್ತಾರೆ, ಕೆಲವೊಮ್ಮೆ ಮಹಿಳೆಯರ ರಕ್ಷಣೆಗಾಗಿ ಮಾಡಿರುವ ಕಾನೂನನ್ನು ಮಹಿಳೆಯರೇ ದುರುಪಯೋಗಪಡಿಸಿಕೊಳ್ಳುತ್ತಾರೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಪುರುಷರ ಘನತೆ, ಗೌರವಗಳ ಬಗ್ಗೆ ಮಾತನಾಡುವುದಕ್ಕೆ ಇದು ಸೂಕ್ತ ಸಮಯ ಎಂದು ಪೋಸ್ಕೋ ಕಾಯ್ದೆ ನ್ಯಾಯಾಲಯದ ನ್ಯಾಯಮೂರ್ತಿ ನಿವೇದಿತಾ ಅನಿಲ್ ಶರ್ಮಾ ಹೇಳಿದ್ದು, ತಾವು ವಿಚಾರಣೆ ನಡೆಸಿದ ಅತ್ಯಾಚಾರ ಪ್ರಕರಣದಲ್ಲಿ ಹಲವು ವಿರೋಧಾಭಾಸಗಳಿದ್ದು, ಪ್ರಾಸಿಕ್ಯೂಷನ್ ನ ವೈಫಲ್ಯ ಎಂದು ಹೇಳಿದ್ದಾರೆ.
ಬಲಿಪಶುಗಳನ್ನು ಸಂತ್ರಸ್ತರು ಎಂದು ಕರೆಯಲಾಗುತ್ತದೆ ಹಾಗಾದರೆ ಅತ್ಯಾಚಾರ ಆರೋಪದಡಿ ಹಲವು ವರ್ಷ ವಿಚಾರಣೆಯನ್ನು ಎದುರಿಸಿ ಜೈಲು ಶಿಕ್ಷೆ ಅನುಭವಿಸಿ ಈಗ ನಿರ್ದೋಷಿ ಎಂದು ಸಾಬೀತಾಗಿರುವ ವ್ಯಕ್ತಿಯನ್ನೂ ಅತ್ಯಾಚಾರದ ಸಂತ್ರಸ್ತರು ಎನ್ನುಬಹುದೇ ಎಂದು ಕೋರ್ಟ್ ಪ್ರಶ್ನಿಸಿದೆ.