ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ 33ನೇ ಪುಣ್ಯತಿಥಿ

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ 33ನೇ ಪುಣ್ಯತಿಥಿ ಇಂದು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ....
ಶಕ್ತಿಸ್ಥಳಕ್ಕೆ ಹೋಗಿ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಶಕ್ತಿಸ್ಥಳಕ್ಕೆ ಹೋಗಿ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ 33ನೇ ಪುಣ್ಯತಿಥಿ ಇಂದು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದೆಹಲಿಯಲ್ಲಿ ಅವರ ಸ್ಮಾರಕದ ಬಳಿ ತೆರಳಿ ಗೌರವ ನಮನ ಸಲ್ಲಿಸಿದರು.
ದೆಹಲಿಯ ಶಕ್ತಿಸ್ಥಳದಲ್ಲಿರುವ ಇಂದಿರಾ ಗಾಂಧಿಯವರ ಸ್ಮಾರಕಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದರು.
ಕಾಂಗ್ರೆಸ್ ತಮ್ಮ ನಾಯಕಿ ಇಂದಿರಾ ಗಾಂಧಿ ಹಾಗೂ ಅವರ ಸಂದೇಶವನ್ನು ಪೋಸ್ಟ್ ಮಾಡಿದ್ದು ಅದರಲ್ಲಿ ಹುತಾತ್ಮತೆ ಕೆಲವನ್ನು ಕೊನೆಗೊಳಿಸುವುದಿಲ್ಲ, ಇದು ಆರಂಭ ಮಾತ್ರ. ಇಂದಿರಾ ಗಾಂಧಿಯವರನ್ನು ನೆನೆಯುವುದು ಮತ್ತು ಭಾರತ ಮತ್ತು ಭಾರತೀಯರ ಮೇಲೆ ಅವರಿಗೆ ಅದಮ್ಯ ಉತ್ಸಾಹವಿರುತ್ತದೆ. ಅವರ ನಿರ್ಣಯ ಅಸಾಮಾನ್ಯವಾಗಿತ್ತು ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಅವರ ಪುಣ್ಯತಿಥಿಯ ಈ ಸಂದರ್ಭದಲ್ಲಿ ನಮನಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ದೇಶದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂರವರ ಮಗಳಾದ ಇಂದಿರಾ ಹುಟ್ಟಿದ್ದು ನವೆಂಬರ್ 19,1917ರಂದು. ಅವರ ಅಂಗರಕ್ಷಕರೇ ಅವರನ್ನು 1984ರ ಅಕ್ಟೋಬರ್ 31ರಂದು ಹತ್ಯೆಗೈದಿದ್ದರು.

ಅವರು 1966ರಿಂದ 1977ರವರೆಗೆ ಮತ್ತು 1980 ಜನವರಿ 14ರಿಂದ ಅವರ ಹತ್ಯೆಯಾಗುವವರೆಗೆ ಭಾರತ ದೇಶದ ಪ್ರಧಾನಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com