ಭಾರತದ 8 ರಾಜ್ಯಗಳಲ್ಲಿನ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿ!

ಹಿಂದೂಸ್ತಾನದಲ್ಲೇ ಹಿಂದೂಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಿ ಎಂದು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ...
ಹಿಂದೂ
ಹಿಂದೂ
ನವದೆಹಲಿ: ಹಿಂದೂಸ್ತಾನದಲ್ಲೇ ಹಿಂದೂಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಿ ಎಂದು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ. 
ಭಾರತದ 8 ರಾಜ್ಯಗಳಲ್ಲಿ ಇರುವ ಹಿಂದೂಗಳನ್ನು ಅಲ್ಪಸಂಖ್ಯಾತ ಸ್ಥಾನಮಾನ ಕೊಡಲೇಬೇಕು ಎಂದು ದೆಹಲಿಯ ವಕೀಲ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಯ ಎಂಬುವರು ಪಿಐಎಲ್ ನಲ್ಲಿ ಮನವಿ ಮಾಡಿದ್ದಾರೆ. 
2011ರ ಜನಗಣತಿ ಪ್ರಕಾರ ಈ 8 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಲಕ್ಷದ್ವೀಪ(2.5%), ವಿಜೋರಾಂ(2.7%), ನಾಗಲ್ಯಾಂಡ್(8.7%), ಮೇಘಾಲಯ(11.53%), ಜಮ್ಮು-ಕಾಶ್ಮೀರ(28.44%), ಅರುಣಾಚಲ ಪ್ರದೇಶ(29%), ಮಣಿಪುರ್(31.39%) ಹಾಗೂ ಪಂಜಾಬ್(38.40%) ಎಂದು ಪಿಐಎಲ್ ನಲ್ಲಿ ತಿಳಿಸಲಾಗಿದೆ. 
ನ್ಯಾಷನಲ್ ಕಮಿಷನ್ ಫಾರ್ ಮೈನಾರಿಟಿ ಕಾಯ್ದೆ ಸೆಕ್ಷನ್ 2(ಸಿ) ಅನ್ವಯ ಈ ರಾಜ್ಯಗಳಲ್ಲಿ ಇರುವ ಹಿಂದುಗಳನ್ನು ಅಲ್ಪಸಂಖ್ಯಾತರು ಎಂಬುದಾಗಿ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಘೋಷಿಸಬೇಕು ಎಂದು ಪಿಐಎಲ್ ನಲ್ಲಿ ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com