ಗಾಜೀಪುರದಲ್ಲಿ ತ್ಯಾಜ್ಯ ಸುರಿಯದಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್‌ ಆದೇಶ

ತಕ್ಷಣದಿಂದ ಜಾರಿಗೆ ಬರುವಂತೆ ಗಾಜೀಪುರದಲ್ಲಿ ಯಾವುದೇ ಘನ ತ್ಯಾಜ್ಯಗಳನ್ನು ಯಾರೂ ಸುರಿಯಕೂಡದು ಎಂದು....
ಗಾಜೀಪುರ ತ್ಯಾಜ್ಯ
ಗಾಜೀಪುರ ತ್ಯಾಜ್ಯ
ನವದೆಹಲಿ: ತಕ್ಷಣದಿಂದ ಜಾರಿಗೆ ಬರುವಂತೆ ಗಾಜೀಪುರದಲ್ಲಿ ಯಾವುದೇ ಘನ ತ್ಯಾಜ್ಯಗಳನ್ನು ಯಾರೂ ಸುರಿಯಕೂಡದು ಎಂದು ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬಜಾಲ್‌ ಅವರು ಶನಿವಾರ ಆದೇಶ ಹೊರಡಿಸಿದ್ದಾರೆ. 
ನಿನ್ನೆ ಸುಮಾರು 15 ಅಂತಸ್ತುಗಳ ಎತ್ತರಕ್ಕೆ ಬಿದ್ದಿದ್ದ ತ್ಯಾಜ್ಯ ಪರ್ವತ ಕುಸಿದು ಬಿದ್ದು ಇಬ್ಬರ ಮೃತಪಟ್ಟ ಹಿನ್ನೆಲೆಯಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಈ ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದು, ಗಾಜೀಪುರದಲ್ಲಿ ಈಗ ಪರ್ವತದೆತ್ತರಕ್ಕೆ ರಾಶಿ ಬಿದ್ದಿರುವ ಘನ ತ್ಯಾಜ್ಯವನ್ನು ಇನ್ನೆರಡು ವರ್ಷದೊಳಗೆ ಖಾಲಿ ಮಾಡುವಂತೆಯೂ ಅವರು ಆದೇಶಿಸಿದ್ದಾರೆ. 
ಇದೇ ವೇಳೆ ಘನ ತ್ಯಾಜ್ಯ ಸುರಿಯುವ ಪ್ರದೇಶಕ್ಕೆ ಸಮೀಪದ ರಸ್ತೆಗೆ ವಾಹನ ಸಂಚಾರ ಮಾರ್ಗವನ್ನು ಬದಲಾಯಿಸುವಂತೆಯೂ ಲೆಫ್ಟಿನೆಂಟ್ ಗವರ್ನರ್ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com