ಭಾರತ-ಚೀನಾ ನಡುವಿನ ಶೀಥಲ ಸಮರಕ್ಕೆ ಕಾರಣವಾಗಿದ್ದ ಡೊಕ್ಲಾಂ ಗಡಿ ವಿವಾದ ಈಗಷ್ಟೇ ಬಗೆಹರಿದಿದ್ದು, ಇತ್ತ ಪಾಕಿಸ್ತಾನದ ಗಡಿ ತಂಟೆ ಮುಂದುವರೆದಿದೆ. ಹೀಗಾಗಿ ಭಾರತಕ್ಕೆ ಸಂಪೂರ್ಣ ಪ್ರಮಾಣದ ರಕ್ಷಣಾ ಸಚಿವರ ಅಗತ್ಯತೆ ಇತ್ತು. ಪರಿಕ್ಕರ್ ಅವರು ರಕ್ಷಣಾ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರಾದರೂ, ಗೋವಾ ಚುನಾವಣೆ ಹಿನ್ನಲೆಯಲ್ಲಿ ಅವರು ತವರಿಗೆ ವಾಪಸಾಗಿದ್ದರು. ಇದೀಗ ಈ ಮಹತ್ವದ ಜವಾಬ್ದಾರಿಯನ್ನು ನಿರ್ಮಲಾ ಸೀತಾರಾಮನ್ ಅವರಿಗೆ ನೀಡಲಾಗಿದೆ. ಈ ಹಿಂದೆ ವಾಣಿಜ್ಯ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಬಡ್ತಿ ಪಡೆದಿರುವ ನಿರ್ಮಲಾ ಸೀತಾರಾಮನ್ ರಕ್ಷಣಾ ಖಾತೆಯನ್ನೂ ಸಮರ್ಥವಾಗಿ ನಿಭಾಯಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.