ಗೋರಕ್ ಪುರ ಆಯ್ತು ಈಗ ಫರೂಕಾಬಾದ್ ಸರದಿ; ಆಕ್ಸಿಜನ್ ಕೊರತೆಯಿಂದ 49 ಮಕ್ಕಳ ಸಾವು!

ಸಿಎಂ ಯೋಗಿ ಆದಿತ್ಯಾನಾಥ್ ಸ್ವಕ್ಷೇತ್ರ ಗೋರಕ್ ಪುರದ ಆಸ್ಪತ್ರೆ ದುರಂತ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದ್ದು, ಫರೂಕಬಾದ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಬರೊಬ್ಬರಿ 49 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಖನೌ: ಸಿಎಂ ಯೋಗಿ ಆದಿತ್ಯಾನಾಥ್ ಸ್ವಕ್ಷೇತ್ರ ಗೋರಕ್ ಪುರದ ಆಸ್ಪತ್ರೆ ದುರಂತ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದ್ದು, ಫರೂಕಬಾದ್ ಆಸ್ಪತ್ರೆಯಲ್ಲಿ ಆಕ್ಸಿಜನ್  ಕೊರತೆಯಿಂದಾಗಿ ಬರೊಬ್ಬರಿ 49 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಪ್ರಾಥಮಿಕ ತನಿಖೆಯ ಪ್ರಕಾರ ಫರೂಕಾಬಾದ್ ದುರಂತ ಕೂಡ ಗೋರಕ್ ಪುರ ಆಸ್ಪತ್ರೆ ದುರಂತವನ್ನು ನೆನಪಿಸುವಂತಿದ್ದು, ಆಸ್ಪತ್ರೆ ಸೂಕ್ತ ಪ್ರಮಾಣದಲ್ಲಿ ಆಕ್ಸಿಜನ್ ಸಿಲಿಂಡರ್ ಗಳ ಪೂರೈಕೆಯಾಗಿರಲಿಲ್ಲ ಎಂದು  ಹೇಳಲಾಗಿದೆ.

ಕಳೆದ ಶನಿವಾರವಷ್ಟೇ ಗೋರಕ್ ಪುರದ ಬಿಆರ್ ಡಿ ಆಸ್ಪತ್ರೆಯ ಮಕ್ಕಳ ಸರಣಿ  ಸಾವಿನ ಪ್ರಕರಣ ಸಂಬಂಧ ಆಸ್ಪತ್ರೆಯ ಹಿರಿಯ ತಜ್ಞ ಕಫೀಲ್ ಖಾನ್ ನನ್ನು ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆ ಈಗಷ್ಟೇ ಆರಂಭವಾಗಿದೆ.  ಅಷ್ಟರಲ್ಲಾಗಲೇ ಮತ್ತದೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಆಸ್ಪತ್ರೆ ದುರಂತ ಸಂಭವಿಸಿರುವುದು ಸಿಎಂ ಯೋಗಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com