ಕೋಲ್ಕತಾ: ಟಿಎಂಸಿ ಸಂಸದ ಸುಲ್ತಾನ್ ಅಹ್ಮದ್ ನಿಧನ

ನಾರದಾ ಕುಟುಕು ಕಾರ್ಯಾಚರಣೆ ಪ್ರಕರಣದಲ್ಲಿ ಆರೋಪಿಯಾಗಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಸುಲ್ತಾನ್ ಅಹ್ಮದ್ ಅವರು ಹೃದಯ ಸ್ತಂಬನದಿಂದ ನಿಧನ ಹೊಂದಿದ್ದಾರೆಂದು...
ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಸುಲ್ತಾನ್ ಅಹ್ಮದ್
ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಸುಲ್ತಾನ್ ಅಹ್ಮದ್
Updated on
ಕೋಲ್ಕತಾ: ನಾರದಾ ಕುಟುಕು ಕಾರ್ಯಾಚರಣೆ ಪ್ರಕರಣದಲ್ಲಿ ಆರೋಪಿಯಾಗಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಸುಲ್ತಾನ್ ಅಹ್ಮದ್ ಅವರು ಹೃದಯ ಸ್ತಂಬನದಿಂದ ನಿಧನ ಹೊಂದಿದ್ದಾರೆಂದು ಸೋಮವಾರ ತಿಳಿದುಬಂದಿದೆ. 
ಹೃದಯ ಸ್ತಂಬನ ಎದುರಾದ ಪರಿಣಾಮ ಸುಲ್ತಾನ್ ಅವರನ್ನು ಕೋಲ್ಕತಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆಂದು ವರದಿಗಳು ತಿಳಿಸಿವೆ. 
ನಾರದಾ ಕುಟುಕು ಕಾರ್ಯಾಚರಣೆಯಲ್ಲಿ ಆರೋಪ ಎದುರಿಸುತ್ತಿರುವ 12 ಮಂದಿ ಪೈಕಿ ಅಹ್ಮದ್ ಪಟೇಲ್ ಕೂಡ ಒಬ್ಬರಾಗಿದ್ದರು. ಪ್ರಕರಣವನ್ನು ಸಿಬಿಐ ಹಾಗೂ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 
ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅಹ್ಮದ್ ಪಟೇಲ್ ಅವರು ಪ್ರವಾಸೋದ್ಯಮ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com