ಇಡಿಯಿಂದ ಲಾಲು ಪುತ್ರಿ ಮಿಸಾ ಭಾರತಿ ದೆಹಲಿ ಫಾರ್ಮ್ ಹೌಸ್ ಜಪ್ತಿ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ, ಸಂಸದೆ ಮಿಸಾ ಭಾರತಿ....
ಮಿಸಾ ಭಾರತಿ
ಮಿಸಾ ಭಾರತಿ
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ, ಸಂಸದೆ ಮಿಸಾ ಭಾರತಿ ಹಾಗೂ ಅವರ ಪತಿ ಶೈಲೇಶ್ ಕುಮಾರ್ ಅವರ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ಲಾಲು ಪುತ್ರಿಗೆ ಸೇರಿದ ದೆಹಲಿಯ ಫಾರ್ಮ್ ಹೌಸ್ ಅನ್ನು ಜಪ್ತಿ ಮಾಡಿದೆ. 
ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ಮಿಸಾ ದಂಪತಿಗೆ ಸೇರಿದ ದಕ್ಷಿಣ ದೆಹಲಿಯ ಬಿಜ್ವಾಸನ್ ಪ್ರದೇಶದಲ್ಲಿರುವ 26, ಪಾಲಂ ಫಾರ್ಮ್ ಅನ್ನು ಇಂದು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. 
ಮಿಶೈಲ್ ಪ್ಯಾಕರ್ಸ್ ಆಂಡ್ ಪ್ರಿಂಟರ್ಸ್ ಪ್ರೈವೇಟ್ ಲಿಮಿಟಿಡ್ ಹೆಸರಿನಲ್ಲಿರುವ ಮಿಸಾ ಭಾರತಿಗೆ ಸೇರಿದೆ ಪಾಲಂ ಫಾರ್ಮ್ ಅನ್ನು ಜಪ್ತಿ ಮಾಡಿರುವುದಾಗಿ ಕೇಂದ್ರೀಯ ತನಿಖಾ ಸಂಸ್ಥೆ ತಿಳಿಸಿದೆ. 
2008-2009ರಲ್ಲಿ ಅಕ್ರಮ ಹಣ ವರ್ಗಾವಣೆ ಮಾಡುವ ಮೂಲಕ ಈ ಫಾರ್ಮ್ ಹೌಸ್ ಅನ್ನು 1. 2 ಕೋಟಿಗೆ ಖರೀದಿಸಲಾಗಿದೆ ಎಂದು ಇಡಿ ಆರೋಪಿಸಿದೆ.
ಕಳೆದ ಜುಲೈ ನಲ್ಲಿ ಉದ್ಯಮಿ ಸಹೋದರರಾದ ಸುರೇಂದ್ರ ಕುಮಾರ್ ಜೈನ್ ಮತ್ತು ವೀರೇಂದ್ರ ಕುಮಾರ್ ಜೈನ್ ಅವರ ಮೇಲೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು, ತೆರಿಗೆ ವಂಚಿಸುವ ಉದ್ದೇಶಕ್ಕಾಗಿಯೇ ಸ್ಥಾಪಿಸಲಾದ 90 ಕಂಪೆನಿಗಳನ್ನು ಬಳಸಿಕೊಂಡು 8,000 ಕೋಟಿ ರುಪಾಯಿ ಅಕ್ರಮ ಹಣ ವರ್ಗಾವಣೆ ನಡೆಸಿರುವುದನ್ನು ಪತ್ತೆ ಹಚ್ಚಿದ್ದರು. 
ಜೈನ್ ಸಹೋದರರನ್ನು ಇ.ಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈಗಾಗಲೇ ಬಂಧಿಸಿದ್ದಾರೆ. ಮಿಶೈಲ್ ಪ್ರಿಂಟರ್ಸ್ ಆ್ಯಂಡ್ ಪ್ಯಾಕರ್ಸ್ ಕಂಪೆನಿಯ ಜೊತೆಯೂ ಜೈನ್ ಸಹೋದರರ ವ್ಯವಹಾರವಿತ್ತು. ಮಿಸಾ ಭಾರತಿ ಮತ್ತು ಅವರ ಪತಿ ಅವರು  ಈ ಕಂಪೆನಿಯ ನಿರ್ದೇಶಕರಾಗಿದ್ದರು ಎಂದು ಹೇಳಲಾಗಿದೆ.
ಮಿಶೈಲ್ ಪ್ರಿಂಟರ್ಸ್ ಆ್ಯಂಡ್ ಪ್ಯಾಕರ್ಸ್ ಕಂಪೆನಿಗೆ ಅಕ್ರಮ ಹಣ ವರ್ಗಾವಣೆ ಮಾಡಲು ನೆರವಾದ ಲೆಕ್ಕ ಪರಿಶೋಧಕ ರಾಜೇಶ್ ಅಗರ್‌ವಾಲ್ ಅವರನ್ನೂ ಈಗಾಗಲೇ ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com