ಉ.ಪ್ರದೇಶ ವಿಧಾನಸಭೆಯಲ್ಲಿ ಸಿಕ್ಕಿದ್ದು ಸ್ಫೋಟಕ ವಸ್ತುವಲ್ಲ, ಸಿಲಿಕಾನ್!

ಉತ್ತರಪ್ರದೇಶ ರಾಜ್ಯದ ವಿಧಾನಸಭೆಯೊಳಗೆ ಜು.12ರಂದು ದೊರಕಿದ್ದ ಸಂಶಯಾಸ್ಪದ ಪುಡಿ ಅತ್ಯಂತ ಅಪಾಯಕಾರಿ ಸ್ಫೋಟಕ 'ಪಿಇಟಿಎನ್' ಅಲ್ಲ ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ...
ಉತ್ತರಪ್ರದೇಶ ವಿಧಾನಸಭೆ (ಸಂಗ್ರಹ ಚಿತ್ರ)
ಉತ್ತರಪ್ರದೇಶ ವಿಧಾನಸಭೆ (ಸಂಗ್ರಹ ಚಿತ್ರ)
ಲಖನೌ: ಉತ್ತರಪ್ರದೇಶ ರಾಜ್ಯದ ವಿಧಾನಸಭೆಯೊಳಗೆ ಜು.12ರಂದು ದೊರಕಿದ್ದ ಸಂಶಯಾಸ್ಪದ ಪುಡಿ ಅತ್ಯಂತ ಅಪಾಯಕಾರಿ ಸ್ಫೋಟಕ 'ಪಿಇಟಿಎನ್' ಅಲ್ಲ ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ. 
ಈ ಹಿಂದೆ ಸಂಶಯಾಸ್ಪದ ಪುಡಿ ಪರೀಕ್ಷಿಸಿದ್ದ ಲಖನೌದ ವಿಧಿವಿಜ್ಞಾನ ಪ್ರಯೋಗಾಲಯ, ಅದನ್ನು ಭಾರೀ ಸ್ಫೋಟದ ಸಾಮರ್ಥ್ಯ ಹೊಂದಿರುವ ಪಿಇಟಿಎನ್ ಎಂದು ಹೇಳಿತ್ತು. 
ಈ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ಹೊಣೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿತ್ತು. ಬಳಿಕ ಎನ್ಐಎ ಸಂಶಯಾಸ್ಪದ ಪುಡಿಯನ್ನು ಹೈದರಾಬಾದ್ ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿತ್ತು. 
ಇದೀಗ ಹೈದರಾಬಾದ್ ಪ್ರಯೋಗಾಲಯ ವರದಿ ನೀಡಿದ್ದು, ಶಂಕಾಸ್ಪದ ಪುಡಿಯನ್ನು ಸಿಲಿಕಾನ್ ಅಕ್ಲೈಡ್ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, 2016ಕ ಮಾರ್ಚ್ ತಿಂಗಳಿನಲ್ಲೇ ವಾಯಿದೆ ಮುಗಿದ ಕಿಟ್ ಅನ್ನು ಲಖನೌ ಪ್ರಯೋಗಾಲಯ ಬಳಸಿದ್ದರಿಂದ ತಪ್ಪು ವರದಿ ಬಂದಿರುವುದು ಇದರಿಂದ ಗೊತ್ತಾಗಿದೆ. 
ಈ ಹಿನ್ನಲೆಯಲ್ಲಿ ತಪ್ಪು ವರದಿ ನೀಡಿದ್ದ ಲಖನೌ ಪ್ರಯೋಗಾಲಯದ ನಿರ್ದೇಶಕ ಶಿವ ಬಿಹಾರಿ ಉಪಾಧ್ಯಾಯ ಅವರನ್ನು ಉತ್ತರಪ್ರದೇಶ ರಾಜ್ಯ ಸರ್ಕಾರ ಅಮಾನತುಗೊಳಿಸಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com