ಮಯನ್ಮಾರ್: ಮಯನ್ಮಾರ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಯನ್ಮಾರ್ ಪ್ರಜೆಗಳಿಗೆ ಉಚಿತ ವೀಸಾ ನೀಡುವುದಾಗಿ ಘೋಷಿಸಿದ್ದಾರೆ.
ಅಲ್ಲಿನ ಸ್ಟೇಟ್ ಕೌನ್ಸಿಲರ್ ಆಂಗ್ ಸಾನ್ ಸೂಕಿ ಅವರೊಂದಿಗೆ ಜಂಟಿ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಮಯನ್ಮಾರ್ ಪ್ರಜೆಗಳಿಗೆ ಉಚಿತ ವೀಸಾ ನೀಡುತ್ತೇವೆ ಎಂಬುದನ್ನು ಘೋಷಿಸಲು ಸಂತಸವಾಗುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.
ಇದೇ ವೇಳೆ ಭಾರತದ ವಿವಿಧ ಜೈಲುಗಳಲ್ಲಿರುವ ಮಯನ್ಮಾರ್ ನ 40 ಪ್ರಜೆಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಭಾರತದಿಂದ ಬಿಡುಗಡೆಯಾಗುವ ಮಯನ್ಮಾರ್ ಪ್ರಜೆಗಳು ಶೀಘ್ರವೇ ತಮ್ಮ ಕುಟುಂಬದವರನ್ನು ಭೇಟಿ ಮಾಡಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.