ಮಹಾರಾಷ್ಟ್ರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು, ಒಂದೇ ದಿನ ಮೂರನೇ ಅವಘಡ

ಮಹಾರಾಷ್ಟ್ರದ ಖಂಡಾಲದಲ್ಲಿ ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ ಘಟನೆ ಗುರುವಾರ ನಡೆದಿದ್ದು, ಒಂದೇ ದಿನದಲ್ಲಿ...
ಬೆಳಗ್ಗೆ ದೆಹಲಿಯಲ್ಲಿ ಹಳಿ ತಪ್ಪಿದ ರಾಜಧಾನಿ ಎಕ್ಸ್ ಪ್ರೆಸ್ ರೈಲು
ಬೆಳಗ್ಗೆ ದೆಹಲಿಯಲ್ಲಿ ಹಳಿ ತಪ್ಪಿದ ರಾಜಧಾನಿ ಎಕ್ಸ್ ಪ್ರೆಸ್ ರೈಲು
Updated on: 
ಖಂಡಾಲ: ಮಹಾರಾಷ್ಟ್ರದ ಖಂಡಾಲದಲ್ಲಿ ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ ಘಟನೆ ಗುರುವಾರ ನಡೆದಿದ್ದು, ಒಂದೇ ದಿನದಲ್ಲಿ ಮೂರು ರೈಲುಗಳು ಹಳಿ ತಪ್ಪಿದ ಅವಘಡ ನಡೆದಿದೆ ಎಂದು ಕೇಂದ್ರ ರೈಲ್ವೆ ವಕ್ತಾರರು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 3.55ರ ಸುಮಾರಿಗೆ ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ್ದು, ಹಳಿಗಳನ್ನು ಸರಿಪಡಿಸುವ ಕಾರ್ಯ ನಡೆದಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಉದಾಸಿ ಅವರನ್ನು ಹೇಳಿದ್ದಾರೆ.
ಈ ಮುಂಚೆ ಇಂದು ಬೆಳಗ್ಗೆ 11.45ಕ್ಕೆ ದೆಹಲಿಯ ಮಿಂಟೊ ಸೇತುವೆ ಬಳಿ ದೆಹಲಿ-ರಾಂಚಿ ರಾಜಧಾನಿ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿತ್ತು. ಇದಕ್ಕು ಮುನ್ನ ಬೆಳಗಿನ ಜಾವ 6.30ರ ಸುಮಾರಿಗೆ ಉತ್ತರ ಪ್ರದೇಶದ ಸೋನ್‌ಭದ್ರಾದ ಓಬ್ರಾ ಬಳಿ ಹೌರಾ -ಜಬಲ್‌ಪುರ್‌ ನಡುವೆ ಸಂಚರಿಸುವ ಶಕ್ತಿಕುಂಜ್‌ ಎಕ್ಸ್‌ಪ್ರೆಸ್‌ ರೈಲಿನ 7 ಬೋಗಿಗಳು ಹಳಿ ತಪ್ಪಿದ್ದವು. ಅದೃಷ್ಟವಶಾತ್ ಈ ಮೂರು ಅಪಘಾತಗಳಲ್ಲೂ ಯಾವುದೇ ಸಾವು ನೋವು ಸಂಭವಿಸಿಲ್ಲ.
ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ವೇಗ ಅತಿ ಕಡಿಮೆ ಇದ್ದುದ್ದರಿಂದ ಕೇವಲ ಎಂಜಿನ್ ಮತ್ತು ಪವರ್ ಬೋಗಿಗೆ ಧಕ್ಕೆಯಾಗಿದೆ. ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಉತ್ತರ ರೈಲ್ವೆ ವಕ್ತಾರ ನೀರಜ್ ಶರ್ಮಾ ಅವರು ತಿಳಿಸಿದ್ದರು.
ಕಳೆದ 20 ದಿನಗಳಲ್ಲಿ ದೇಶದಲ್ಲಿ ಆರು ರೈಲು ಅವಘಡ ಸಂಭವಿಸಿದ್ದು, ಪಿಯೂಷ್‌ ಗೋಯಲ್‌ ಅವರು ರೈಲ್ವೇ ಸಚಿವರಾಗಿ ಅಧಿಕಾರ ಸ್ವೀಕರಿಸಿದ ವಾರದ ಒಳಗೆ ಒಂದೇ ದಿನ ಎರಡು ರೈಲುಗಳು ಹಳಿ ತಪ್ಪಿರುವುದು ನೂತನ ಸಚಿವರನ್ನು ಚಿಂತೆಗೀಡುಮಾಡಿದೆ. ನಿರಂತರ ರೈಲು ಅವಘಡವಾದ ಹಿನ್ನಲೆಯಲ್ಲಿ ರೈಲ್ವೆ ಖಾತೆಯನ್ನು ಸುರೇಶ್‌ ಪ್ರಭು ಅವರಿಂದ ಬದಲಾವಣೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com