ಈಗಾಗಲೇ ಸೇನಾಪಡೆಯ ಹಲವು ತುಕಡಿಗಳು ಹಾಗೂ ಪೊಲೀಸ್ ಪಡೆ ಸಿರ್ಸಾ ಆಶ್ರಮ ಪ್ರವೇಶ ಮಾಡಿದ್ದು, ಪೊಲೀಸರಿಗೆ ಸೈನಿಕರು ಸಾಥ್ ನೀಡಿದ್ದಾರೆ. ಇದಲ್ಲದೇ ಆಶ್ರಮಕ್ಕೆ ಬಾಂಬ್ ನಿಷ್ಕ್ರಿಯ ದಳಗಳು ಹಾಗೂ ಶ್ವಾನದಳಗಳೂ ಕೂಡ ಪ್ರವೇಶ ಮಾಡಿವೆ ಎಂದು ತಿಳಿದುಬಂದಿದೆ. ಇನ್ನು ಆಶ್ರಮದಲ್ಲಿ ಶೋಧ ಕಾರ್ಯ ನಡೆಸುತ್ತಿರುವ ಹಿನ್ನಲೆಯಲ್ಲಿ ಡೇರಾ ಸಚ್ಚಾ ಆಶ್ರಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿದ್ದು, ಆಶ್ರಮ ಪ್ರವೇಶಿಸುವ ಭಕ್ತರನ್ನು ತೀವ್ರ ಶೋಧಕ್ಕೆ ಒಳಪಡಿಸಲಾಗುತ್ತಿದೆ.