ಮಿಲಿಟರಿ ಪೊಲೀಸ್ ಪಡೆಗೆ ಶೀಘ್ರವೇ 800 ಮಹಿಳಾ ಸಿಬ್ಬಂದಿ ನೇಮಕ

ಮಿಲಿಟರಿ ಪೊಲೀಸ್ ಪಡೆಯಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತೀಯ ಸೇನೆಯ ಮಿಲಿಟರಿ ಪೊಲೀಸ್ ಪಡೆಗೆ ಶೀಘ್ರವೇ ಮಹಿಳಾ ಸಿಬ್ಬಂದಿ ನೇಮಕಗೊಳ್ಳಲಿದ್ದಾರೆ. ಪ್ರತಿವರ್ಷ 52 ಸಿಬ್ಬಂದಿಯಂತೆ ಸರಿಸುಮಾರು 800 ಮಹಿಳೆಯರನ್ನು ಮಿಲಿಟರಿ ಪೊಲೀಸ್ ಪಡೆಗೆ  ಸೇರಿಸಿಕೊಳ್ಳಲು ಯೋಜನೆ ಅಂತಿಮಗೊಳಿಸಲಾಗಿದೆ. 
ಲಿಂಗ ತಾರತಮ್ಯವನ್ನು ಹೋಗಲಾಡಿಸಿ ಸೇನೆಯಲ್ಲಿ ಮಹಿಳೆಯರಿಗೆ ಕೂಡ ಸಮಾನ ಪ್ರಾತಿನಿಧ್ಯ ಕೊಡುವಲ್ಲಿ ಇದು ಬಹುದೊಡ್ಡ ಕ್ರಮವಾಗಿದೆ ಎಂದು ಭಾರತೀಯ ಸೇನೆಯ ಸೈನ್ಯದ ಅಡ್ಜಟಂಟ್ ಜನರಲ್ ಲೆ.ಜನರಲ್ ಅಶ್ವನಿ ಕುಮಾರ್ ತಿಳಿಸಿದ್ದಾರೆ.
ಭಾರತೀಯ ಸೇನೆಗೆ ಮಹಿಳಾ ಜವಾನರನ್ನು ನೇಮಕ ಮಾಡಿಕೊಳ್ಳುವ ಕುರಿತು ಯೋಜನೆ ನಡೆಯುತ್ತಿದೆ ಎಂದು  ಭಾರತೀಯ ಸೇನಾ ಮುಖ್ಯಸ್ಥ ಜನರಲ್.ಬಿಪಿನ್ ರಾವತ್ ಕಳೆದ ಜೂನ್ ತಿಂಗಳಲ್ಲಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಮಿಲಿಟರಿ ಪೊಲೀಸ್ ಪಡೆಯಲ್ಲಿ  ಮಹಿಳೆಯರ ನೇಮಕದಿಂದ ಲಿಂಗ ಆಧಾರಿತ ಅಪರಾಧಗಳಲ್ಲಿ ತನಿಖೆ ನಡೆಸಲು ಪೊಲೀಸರಿಗೆ ಸಹಾಯವಾಗುತ್ತದೆ ಎಂದರು ಲೆಫ್ಟಿನೆಂಟ್ ಜನರಲ್ ಕುಮಾರ್.
ಪ್ರಸ್ತುತ ಭಾರತೀಯ ಸೇನೆಯ  ವೈದ್ಯಕೀಯ, ಕಾನೂನು, ಶಿಕ್ಷಣ, ಸೂಚನೆ ಮತ್ತು ಎಂಜಿನಿಯರಿಂಗ್ ವಿಭಾಗಗಳಲ್ಲಿ ಮಹಿಳೆ ಸಿಬ್ಬಂದಿಗಳಿದ್ದಾರೆ.
ಸೈನಿಕರ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸುವುದನ್ನು ತಡೆಗಟ್ಟುತ್ತದೆ, ಶಾಂತಿ ಮತ್ತು ಯುದ್ಧದ ಸಮಯದಲ್ಲಿ ಸೈನಿಕರ ಚಲನೆಯನ್ನು ನಿರ್ವಹಿಸುವುದು, ಯುದ್ಧದ ಕೈದಿಗಳನ್ನು ನಿಭಾಯಿಸುವುದು ಮತ್ತು ಅಗತ್ಯವಿದ್ದಾಗ ನಾಗರಿಕ ಪೊಲೀಸರಿಗೆ ನೆರವು ವಿಸ್ತರಿಸುವ ಕೆಲಸವನ್ನು ಮಿಲಿಟರಿ ಪೊಲೀಸರು ನಿಭಾಯಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com