ಹಿಂದೂ ದೇವರುಗಳಿಗೆ ಅಪಮಾನ: ಕೇಶ ವಿನ್ಯಾಸಕಾರ ಜಾವೇದ್ ಹಬೀಬ್ ವಿರುದ್ಧ ದೂರು

ವೃತ್ತ ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ಹಿಂದೂ ದೇವತೆಗಳಿಗೆ ಅಪಮಾನ ಮಾಡಿರುವ ಆರೋಪದ ಮೇಲೆ ಕೇಶ ವಿನ್ಯಾಸಕಾರ ಜಾವೆದ್ ಹಬೀಬ್ ವಿ...
ಜಾವೆದ್ ಹಬೀಬ್
ಜಾವೆದ್ ಹಬೀಬ್
ಹೈದರಾಬಾದ್: ವೃತ್ತ ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ಹಿಂದೂ ದೇವತೆಗಳಿಗೆ ಅಪಮಾನ ಮಾಡಿರುವ ಆರೋಪದ ಮೇಲೆ ಕೇಶ ವಿನ್ಯಾಸಕಾರ ಜಾವೆದ್ ಹಬೀಬ್ ವಿರುದ್ಧ ದೂರು ದಾಖಲಿಸಲಾಗಿದೆ.
ಕೆ.ಕರುಣಾ ಸಾಗರ್ ಎಂಬ ವಕೀಲ ಈ ಸಂಬಂಧ ಸೈದಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಿಂದೂಗಳ ನಂಬಿಕೆ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ವಿಚಾರಣೆಗಾಗಿ ಹಬೀಬ್ ಗೆ ನೊಟೀಸ್ ನೀಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನು ಅಭಿಪ್ರಾಯ ತೆಗೆದುಕೊಂಡು ನಂತರ ಪ್ರಕ್ರಿಯೆ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ. ಇನ್ನೂ ಇದುವರೆಗೆ ಅಬೀಬ್ ಕ್ಷಮಾಪಣೆ ಕೇಳಿಲ್ಲ, ದೇವರುಗಳು ಕೂಡ ತನ್ನ ಸಲೂನ್ ಗೆ ಭೇಟಿ ನೀಡುತ್ತಾರೆ ಎಂಬ ಕ್ಯಾಫ್ಷನ್ ಅಡಿ ತಲೆ ಬರಹ ನೀಡಲಾಗಿದೆ, ಹೀಗಾಗಿ ಹಬೀಬ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com