ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ದೇಶದಲ್ಲಿನ್ನೂ ಶೇ.20 ಅನಕ್ಷರಸ್ಥರಿದ್ದಾರೆ: ವೆಂಕಯ್ಯ ನಾಯ್ಡು

ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದ್ದರೂ, ದೇಶದಲ್ಲಿ ಇನ್ನೂ ಶೇ.20ರಷ್ಟು ಅನಕ್ಷರಸ್ಥರಿದ್ದಾರೆಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು...
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು
Updated on
ರಾಂಚಿ: ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದ್ದರೂ, ದೇಶದಲ್ಲಿ ಇನ್ನೂ ಶೇ.20ರಷ್ಟು ಅನಕ್ಷರಸ್ಥರಿದ್ದಾರೆಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶುಕ್ರವಾರ ಹೇಳಿದ್ದಾರೆ. 
ಅಂತರರಾಷ್ಟ್ರೀಯ ಸಾಕ್ಷರತಾ ದಿನ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದ್ದರೂ ಇನ್ನೂ ಈ ದೇಶದಲ್ಲಿ ಶೇ.20 ರಷ್ಟು ಜನರು ಅನಕ್ಷರಸ್ಥರಾಗಿದ್ದಾರೆಂದರೆ ನಾಚಿಕೆಯಾಗುತ್ತದೆ ಎಂದು ಹೇಳಿದ್ದಾರೆ. 
ದೇಶದಲ್ಲಿರುವ 30 ಕೋಟಿ ಜನರು ಅಕ್ಷರಸ್ಥರಾಗಿದ್ದು, ಅನಕ್ಷರತೆ ಎಂಬುದು ರಾಜಕೀಯ ವಿಚಾರವಲ್ಲ. ದೇಶದಲ್ಲಿನ ಅನಕ್ಷರತೆಯನ್ನು ತೊಡೆದು ಹಾಕಲು ಪ್ರತೀಯೊಬ್ಬ ನಾಗರೀಕರನೂ ಆಲೋಚನೆ ಮಾಡಬೇಕಿದೆ. ಅನಕ್ಷರತೆಯನ್ನು ದೂರಾಗಿಸುವುದು ಕೇವಲ ಸರ್ಕಾರದ ಜವಾಬ್ದಾರಿಯಷ್ಟೇ ಆಗಿಲ್ಲ. ಸಮಾಜದ ಜವಾಬ್ದಾರಿಯಾಗಿದೆ. ಬಡವನ ಉನ್ನತಿ, ರಾಜ್ಯ ಮತ್ತು ದೇಶದ ಅಭಿವೃದ್ಧಿ, ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಟ ಮಾಡುವುದಕ್ಕೆ ಶಿಕ್ಷಣ ಅತ್ಯಂತ ಮುಖ್ಯವಾಗುತ್ತದೆ. ದೇಶವನ್ನು ಅಕ್ಷರಸ್ಥ ರಾಷ್ಟ್ರವಾಗಿಸಲು ಸರ್ಕಾರ ಸಾಕಷ್ಟು ಪರಿಶ್ರಮಗಳನ್ನು ಪಟ್ಟಿದ್ದರೂ ಶೇ.80 ರಷ್ಟು ಜನತೆ ಮಾತ್ರ ಅಕ್ಷರಸ್ಥರಾಗಿದ್ದಾರೆಂದು ತಿಳಿಸಿದ್ದಾರೆ. 
ಇದೇ ವೇಳೆ ರಾಘುಬಾರ್ ದಾಸ್ ಸರ್ಕಾರವನ್ನು ಕೊಂಡಾಡಿರುವ ಅವರು, ಮೂರು ವರ್ಷಗಳಲ್ಲಿ 32 ಲಕ್ಷ ಜನರನ್ನು ಅಕ್ಷರಸ್ಥರನ್ನಾಗಿ ಮಾಡಲಾಗಿದೆ. 2019/20ರ ವೇಳೆಗೆ ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಿದ್ದೇ ಅದರೆ, ಇದು ಆ ರಾಜ್ಯದ ದೊಡ್ಡ ಸಾಧನೆಯಾಗುತ್ತದೆ ಎಂದಿದ್ದಾರೆ. 
ಅಕ್ಷರ ಜ್ಞಾನ ಎಂಬುದು ಆತ್ಮ ಗೌರವ ಇದ್ದಂತೆ. ಸಾಕ್ಷರತೆ ಅಭಿವೃದ್ಧಿ ಪ್ರಮುಖ ಬಿಂದು. ಸಾಕ್ಷರತೆ ಅಭಿಯಾನವನ್ನು ಸರ್ಕಾರಕ್ಕಷ್ಟೇ ಸೀಮಿತವಲ್ಲ. ಈ ಕಾರ್ಯಕ್ರದಲ್ಲಿ ಪ್ರತೀಯೊಬ್ಬ ನಾಗರೀಕರನೂ ಪಾಲ್ಗೊಳ್ಳಬೇಕಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com