ಅಸರಾಂ ಬಾಪು, ರಾಧೆ ಮಾ, ರಾಮ್ ರಹೀಂ ಸಿಂಗ್ ರನ್ನು 'ನಕಲಿ ಬಾಬಾ'ಗಳ ಪಟ್ಟಿಗೆ ಸೇರಿಸಿ..!

ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವರಾದ ಅಸರಾಂ ಬಾಪು, ರಾಧೆ ಮಾ, ಬಾಬಾ ರಹೀಂ ರಂತಹ ಬಾಬಾಗಳನ್ನು ನಕಲಿ ಬಾಬಾಗಳ ಪಟ್ಟಿಗೆ ಸೇರಿಸಬೇಕು ಎಂದು ಅಖಿಲ ಭಾರತೀಯ ಅಖರ ಪರಿಷತ್ ಭಾನುವಾರ ಆಗ್ರಹಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವರಾದ ಅಸರಾಂ ಬಾಪು, ರಾಧೆ ಮಾ, ಬಾಬಾ ರಹೀಂ ರಂತಹ ಬಾಬಾಗಳನ್ನು ನಕಲಿ ಬಾಬಾಗಳ ಪಟ್ಟಿಗೆ  ಸೇರಿಸಬೇಕು ಎಂದು ಅಖಿಲ ಭಾರತೀಯ ಅಖರ ಪರಿಷತ್ ಭಾನುವಾರ ಆಗ್ರಹಿಸಿದೆ.
ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿರುವ ಅಖರ ಪರಿಷತ್ 14 ಸ್ವಯಂಘೋಷಿತ ದೇವಮಾನವರನ್ನು ಪಟ್ಟಿ ಮಾಡಿ ಈ ನಕಲಿ ಬಾಬಾಗಳ ವಿರುದ್ಧ ಕ್ರಮಕ್ಕೆ ಕಾನೂನು ರಚಿಸುವಂತೆ ಆಗ್ರಹಿಸಿದೆ. ಈ ಬಗ್ಗೆ ಮಾಧ್ಯಮಗಳಿಗೆ  ಮಾಹಿತಿ ನೀಡಿರುವ ಅಖರ ಪರಿಷತ್ ನ ಅಧ್ಯಕ್ಷ ನರೇಂದ್ರ ಗಿರಿ ಅವರು, ನಮ್ಮ ಸಮಾಜದಲ್ಲಿ ಹಲವು ನಕಲಿ ಬಾಬಾ ಗಳಿದ್ದಾರೆ. ಅವರನ್ನು ನಾವು ಬಾಬಾ ಎಂಬ ಪದದಿಂದ ಕರೆಯಬಾರದು. ಇವರಿಂದ ಅಸಲಿ ಗುರುಗಳನ್ನೂ ಕೂಡ  ಜನರ ಶಂಕೆಯಿಂದ ನೋಡುವಂತಾಗಿದೆ. ಹೀಗಾಗಿ ನಮ್ಮ ಸಮಿತಿ 14 ಮಂದಿ ನಕಲಿ ಬಾಬಾಗಳನ್ನು ಗುರುತಿಸಿದ್ದು, ಇವರನ್ನು ಇನ್ನು ಮುಂದೆ ಬಾಬಾಗಳೆಂದು ಕರೆಯಬಾರದು ಎಂದು ತೀರ್ಮಾನಿಸಿದೆ.
ಅಲ್ಲದೆ ಇಂತಹ ನಕಲಿ ಬಾಬಾಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಈ ಸ್ವಯಂಘೋಷಿತ ದೇವಮಾನವರ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡು ಇವರಲ್ಲೆರನ್ನೂ ಜೈಲಿಗಟ್ಟಬೇಕು ಎಂದು  ಆಗ್ರಹಿಸಿದೆ.
ಅಖರ ಪರಿಷತ್ ಪಟ್ಟಿ ಮಾಡಿರುವ 14 ನಕಲಿ ಬಾಬಾಗಳ ಪಟ್ಟಿ ಇಂತಿದೆ.
1.ಆಸರಾಮ್ ಬಾಪು
2.ರಾಧೇ ಮಾ (ಸುಖ್ವೀಂದರ್ ಕೌರ್)
3.ಸಚ್ದಾರಂಗಿ
4.ಗುರ್ಮಿತ್ ರಾಮ್ ರಹೀಮ್ ಸಿಂಗ್
5.ಓಂ ಬಾಬಾ ಅಕಾ ವಿವೇಕಾನಂದ
6.ನಿರ್ಮಲ್ ಬಾಬಾ
7.ಇಚ್ಛಾಧಾರಿ ವಿಶ್ವನಾಂದ್
8.ಸ್ವಾಮಿ ಅಸ್ಮಿಯಾನಂದ್
9.ಸ್ವಾಮಿ ಓಂ ನಮಃ ಶಿವಾಯ್
10.ನಾರಾಯಣ್ ಸಾಯಿ ರಾಮ್ ಪಾಲ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com