ಕಾಶ್ಮೀರ ಮತ್ತೆ ಸ್ವರ್ಗವಾಗುವುದನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ: ರಾಜನಾಥ ಸಿಂಗ್

ಕಾಶ್ಮೀರ ಮತ್ತೆ ಸ್ವರ್ಗವಾಗುವುದನ್ನು ತಡೆಯಲು ಯಾವುದೇ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಭಾನುವಾರ ಹೇಳಿದ್ದಾರೆ...
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್
ಅನಂತ್'ನಾಗ್: ಕಾಶ್ಮೀರ ಮತ್ತೆ ಸ್ವರ್ಗವಾಗುವುದನ್ನು ತಡೆಯಲು ಯಾವುದೇ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಭಾನುವಾರ ಹೇಳಿದ್ದಾರೆ. 
ನಾಲ್ಕು ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿರುವ ಅವರು ಇಂದು ಕಾಶ್ಮೀರ ಪೊಲೀಸರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಮಾತನಾಡಿರುವ ಅವರು, ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ತೆರೆ ಹೃದಯದಿಂದ ಯಾವು ವ್ಯಕ್ತಿ ಜೊತೆಗಾದರೂ ಮಾತುಕತೆ ನಡೆಸಲು ಸಿದ್ಧನಿದ್ದೇನೆಂದು ಹೇಳಿದ್ದಾರೆ. 
ಕಾಶ್ಮೀರ ಹಿಂಸಾಚಾರವನ್ನು ತೊಡೆದು ಹಾಕಲಿದೆ ಮತ್ತು. ಮತ್ತೆ ಸ್ವರ್ಗವಾಗಿ ನಿರ್ಮಾಣಗೊಳ್ಳಲಿದೆ. ಇದನ್ನು ತಡೆಯಲು ಯಾವ ದೇಶದಿಂದಲೂ ಸಾಧ್ಯವಿಲ್ಲ. ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪಿಸಲು ಕಾಶ್ಮೀರಿಗರು ಮುಂದೆ ಬಂದು ಚರ್ಚೆ ನಡೆಸಬೇಕು. ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ. ತೆರೆದ ಹೃದಯದೊಂದಿಗೆ ಮಾತುಕತೆ ನಡೆಸಲು ನಾನು ಸಿದ್ಧನಿದ್ದೇನೆ. ಕಾಶ್ಮೀರದ ಹಿಂಸಾಚಾರವನ್ನು ತೊಡೆದು ಹಾಕಲಿದೆ. ಮತ್ತೆ ಕಾಶ್ಮೀರ ಸ್ವರ್ಗವಾಗಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಠಾಣೆಗಳಿಗೆ ಬುಲೆಟ್ ಪ್ರೂಫ್ ವಾಹನಗಳನ್ನು ನೀಡುವಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ನಮ್ಮ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ನೀಡಲಾಗುತ್ತದೆ. ಶೀಘ್ರದಲ್ಲಿಯೇ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ. 
 
ಇದೇ ವೇಳೆ ಮಂಗಳವಾರ ಶೀಘ್ರದಲ್ಲಿ ಉಗ್ರರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಬಲಿಯಾಗಿದ್ದ ಎಎಸ್ಐ ಅಬ್ದುಲ್ ರಶೀದ್ ಕುರಿತಂತೆ ಮಾತನಾಡಿರುವ ಅವರು, ರಶೀದ್ ಅವರ ಮಗಳ ದುಃಖವನ್ನು ನೋಡುತ್ತಿದ್ದರೆ, ಬಹಳ ನೋವಾಗುತ್ತದೆ ಎಂದು ಹೇಳಿದ್ದಾರೆ. 

ಭದ್ರತಾ ಸಿಬ್ಬಂದಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಿರುವ ಸಂದೇಶ ಕುರಿತಂತೆ ಮಾತನಾಡಿರುವ ಅವರು ರಾಜನಾಥ ಸಿಂಗ್, ಯೋಧರ ತ್ಯಾಗ ಹಾಗೂ ಬಲಿದಾನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೆಚ್ಚಿಕೊಂಡಿದ್ದು, ಶೌರ್ಯವನನ್ನು ಕೊಂಡಾಡಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com