ಕೆಲ ದಿನಗಳ ಹಿಂದಷ್ಟೇ ಭಾರತೀಯ ಸೇನೆಯ ಬಳಿಯಿರುವ ಶಸ್ತ್ರಾಸ್ತ್ರಗಳ ಬಗ್ಗೆ ಲೆಕ್ಕ ಪರಿಶೋಧನಾ ಸಮತಿ (ಸಿಎಜಿ) ಕೇಂದ್ರ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಿತ್ತು. ವರದಿಯಲ್ಲಿ ಯುದ್ಧ ನಡೆದರೆ ಭಾರತೀಯ ಸೇನೆಗೆ 152 ವಿಧದ ಶಸ್ತ್ರಾಸ್ತ್ರಗಳು ತುರ್ತಾಗಿ ಬೇಕಾಗುತ್ತದೆ. ಆದರೆ ಈ ಪೈಕಿ 61 ವಿಧದ ಶಸ್ತ್ರಾಸ್ತ್ರಗಳು ಸತತ 20 ದಿನ ಯುದ್ಧ ನಡೆದರೆ ಖಾಲಿಯಾಗುತ್ತವೆ. 31 ವಿಧದ ಶಸ್ತ್ರಾಸ್ತ್ರಗಳ ದಾಸ್ತಾನು ತೃಪ್ತಿದಾಯಕವಾಗಿದೆಯಾದರೂ ಉಳಿದ 60 ವಿಧದ ಶಸ್ತ್ರಾಸ್ತ್ರಗಳ ಪ್ರಮಾಣ ಕಡಿಮೆ ಪ್ರಮಾಣದಲ್ಲಿವೆ ಎಂದು ವರದಿಯಲ್ಲಿ ತಿಳಿಸಿತ್ತು.
ಯಾವುದೇ ಸಂದರ್ಭದಲ್ಲಿ ಯುದ್ಧ ಘೋಷಣೆಯಾದರೆ ಕನಿಷ್ಠ 40 ದಿನಗಳಿಗಾಗುವಷ್ಟು ಶಸ್ತ್ರಾಸ್ತ್ರಗಳ ಸಂಗ್ರಹ ಆ ದೇಶದಲ್ಲಿ ಇರಬೇಕು ಎಂಬ ನಿಯಮವಿದೆ.