'ಬುದ್ಧ' ಇದ್ದಿದ್ದರೆ ರೊಹಿಂಗ್ಯಾ ಮುಸ್ಲಿಮರಿಗೆ ಸಹಾಯ ಮಾಡುತ್ತಿದ್ದರು: ದಲೈಲಾಮಾ

ದೈವದೂತ ಗೌತಮ ಬುದ್ಧ ಇದ್ದಿದ್ದರೆ, ಖಂಡಿತವಾಗಿಯೂ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸಹಾಯ ಮಾಡುತ್ತಿದ್ದರು ಎಂದು ಟಿಬೆಟ್'ನ ಆಧ್ಯಾತ್ಮಿಕ ಧರ್ಮ ಗುರು ದಲೈಲಾಮಾ ಅವರು ಹೇಳಿದ್ದಾರೆ...
ಆಧ್ಯಾತ್ಮಿಕ ಧರ್ಮ ಗುರು ದಲೈಲಾಮಾ
ಆಧ್ಯಾತ್ಮಿಕ ಧರ್ಮ ಗುರು ದಲೈಲಾಮಾ
ನವದೆಹಲಿ: ದೈವದೂತ ಗೌತಮ ಬುದ್ಧ ಇದ್ದಿದ್ದರೆ, ಖಂಡಿತವಾಗಿಯೂ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸಹಾಯ ಮಾಡುತ್ತಿದ್ದರು ಎಂದು ಟಿಬೆಟ್'ನ ಆಧ್ಯಾತ್ಮಿಕ ಧರ್ಮ ಗುರು ದಲೈಲಾಮಾ ಅವರು ಹೇಳಿದ್ದಾರೆ. 
ಮ್ಯಾನ್ಮಾರ್ ನಲ್ಲಿ ರೊಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಜನರು ಮುಸ್ಲಿಮರಿಗೆ ಕಿರುಕುಳ ನೀಡುತ್ತಿದ್ದಾರೆ. ಇಂತಹ ಸಮಯದಲ್ಲಿ ಬುದ್ಧನಿದ್ದಿದ್ದರೆ, ಖಂಡಿತವಾಗಿಯೂ ಬಡ ಮುಸ್ಲಿಮರಿಗೆ ಸಹಾಯ ಮಾಡುತ್ತಿದ್ದರು. ನನಗೆ ಈ ಬಗ್ಗೆ ಬಳಳ ದುಃಖವಾಗುತ್ತಿದೆ ಎಂದು ಹೇಳಿದ್ದಾರೆ. 
ಆ.25ರಂದು ತೀವ್ರವಾದಿಗಳ ದಾಳಿಯೊಂದರ ಬಳಿಕ ಮ್ಯಾನ್ಮಾರ್ ಸೇನೆಯು ರಾಖೀನ್ ರಾಜ್ಯದಲ್ಲಿ ನಡೆಸಿದ್ದ ಕಾರ್ಯಾಚರಣೆಯ ಫಲವಾಗಿ ಲಕ್ಷಕ್ಕೂ ಹೆಚ್ಚು ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶ ಹಾಗೂ ಭಾರತಕ್ಕೆ ವಲಸೆ ಹೋಗಿದ್ದಾರೆ. 
ರೊಹಿಂಗ್ಯಾ ವಿವಾದ ಕುರಿತತೆ ಭಾರತ ಕೂಡ ಆತಂಕ ವ್ಯಕ್ತಪಡಿಸಿದ್ದು, ಮ್ಯಾನ್ಮಾರ್ ದೇಶ ಪರಿಸ್ಥಿತಿಯನ್ನು ಸಂಯಮ ಹಾಗೂ ಪ್ರಬುದ್ಧತೆಯಿಂದ ನಿರ್ವಹಿಸಬೇಕು ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com