ಶಂಕಾಸ್ಪದ ಡ್ರೋಣ್ ಗಳ ಹೊಡೆದುರುಳಿಸಲು ಎನ್ಎಸ್ ಜಿ, ಸಿಐಎಸ್ ಎಫ್ ಗೆ ಅಧಿಕಾರ!

ಆಗಸದಲ್ಲಿ ಶಂಕಾಸ್ಪದವಾಗಿ ಹಾರಾಡುವ ಡ್ರೋಣ್ ಗಳನ್ನು ಯಾವುದೇ ಮುಲಾಜಿಲ್ಲದೇ ಹೊಡೆದುರುಳಿಸಲು ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ ಜಿ) ಹಾಗೂ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಪಡೆಗಳಿಗೆ ವಿಶೇಷ ಅಧಿಕಾರ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಆಗಸದಲ್ಲಿ ಶಂಕಾಸ್ಪದವಾಗಿ ಹಾರಾಡುವ ಡ್ರೋಣ್ ಗಳನ್ನು ಯಾವುದೇ ಮುಲಾಜಿಲ್ಲದೇ ಹೊಡೆದುರುಳಿಸಲು ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ ಜಿ) ಹಾಗೂ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)  ಪಡೆಗಳಿಗೆ ವಿಶೇಷ ಅಧಿಕಾರ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಇದಕ್ಕಾಗೆ ಕೇಂದ್ರದ ರಕ್ಷಣಾ ಇಲಾಖೆ ಗೃಹ ಇಲಾಖೆಯೊಂದಿಗೆ ಸೇರಿ ಹೊಸ ನೀತಿ ರಚನೆಗೆ ಮುಂದಾಗಿದ್ದು, ತಿಂಗಳಾಂತ್ಯದ ಹೊತ್ತಿಗೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೆಳ ಮಟ್ಟದಲ್ಲಿ ಹಾರಾಡುವ ವಸ್ತುಗಳು, ಡ್ರೋನ್‌ಗಳು, ಗ್ಲೆ„ಡರ್‌ಗಳು ಮುಂತಾದುವುಗಳಿಂದ ಭಯೋತ್ಪಾದಕ ದಾಳಿ ನಡೆಯುವ ಅಪಾಯದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳು ಅಧಿಕಾರ ಹೊಂದಲಿವೆ.
ಎನ್ಎಸ್ ಜಿ ಮತ್ತು ಸಿಐಎಸ್ ಎಫ್ ಎರಡೂ ಪಡೆಗಳ ಬಳಿ ಈಗಾಗಲೇ ಆಂತರಿಕ ರಾಡಾರ್‌, ರೇಡಿಯೋ ಫ್ರೀಕ್ವೆನ್ಸಿ ಜಾಮರ್‌ ಮತ್ತು ಡಿಟೆಕ್ಟರ್‌ ಹೊಂದಿದ ಎಲೆಕ್ಟ್ರೋ ಮ್ಯಾಗ್ನೆಟಿಕ್‌ ಸಿಸ್ಟಂ ಇದ್ದು, ಇವುಗಳ ಮೂಲಕ ಹಾರುವ ವಸ್ತುಗಳನ್ನು ಹೊಡೆದುರುಳಿಸಲಾಗುತ್ತದೆ ಎಂದು ರಕ್ಷಣಾ ತಜ್ಞರು ಹೇಳಿದ್ದಾರೆ.
ಇನ್ನು ಈ ಬಗ್ಗೆ ನಡೆದ ಮಹತ್ವದ ಸಭೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ಸೇರಿದಂತೆ ಗೃಹ ಇಲಾಖೆಯ ಹಲವು ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಭೆ ಬಳಿಕ ಮಾಹಿತಿ ನೀಡಿರುವ ಕೇಂದ್ರ ಗೃಹ ಇಲಾಖೆ, ಭದ್ರತಾ ಪಡೆಗಳಿಗೆ ಡ್ರೋಣ್ ಅಥವಾ ಶಂಕಾಸ್ಪದವಾಗಿ ಹಾರುವ ವಸ್ತುಗಳನ್ನು ಹೊಡೆದುರುಳಿಸಲು ಕಾನೂನಾತ್ಮಕ ಅವಕಾಶವನ್ನು ನೀಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಎನ್​ಎಸ್​ಜಿ ಮತ್ತು ಸಿಐಎಸ್​ಎಫ್ ಇನ್​ಬಿಲ್ಟ್ ರೇಡಾರ್, ರೇಡಿಯೋ ಫ್ರೀಕ್ವೆನ್ಸಿ ಜಾಮರ್ ಮತ್ತು ಡಿಟೆಕ್ಟರ್​ಗಳನ್ನು ಒಳಗೊಂಡ ಎಲೆಕ್ಟ್ರೋಮ್ಯಾಗ್ನೇಟಿಕ್ ಸಿಸ್ಟಂ ಹೊಂದಲಿವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com