ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ತುಟ್ಟಿಭತ್ಯೆ ಶೇಕಡ 1ರಷ್ಟು ಹೆಚ್ಚಳ

ಕೇಂದ್ರ ಸರ್ಕಾರ ತನ್ನ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು(ಡಿಎ) ಶೇ 1ರಷ್ಟು ಹೆಚ್ಚಿಸಲು ಸಂಪುಟ ಸಭೆ ನಿರ್ಧರಿಸಿದೆ...
ನೌಕರರು
ನೌಕರರು
ನವದೆಹಲಿ: ಕೇಂದ್ರ ಸರ್ಕಾರ ತನ್ನ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು(ಡಿಎ) ಶೇ 1ರಷ್ಟು ಹೆಚ್ಚಿಸಲು ಸಂಪುಟ ಸಭೆ ನಿರ್ಧರಿಸಿದೆ. ಇದರಿಂದಾಗಿ 50 ಲಕ್ಷ ನೌಕರರು ಮತ್ತು 61 ಲಕ್ಷ ಪಿಂಚಣಿದಾರರಿಗೆ ಅನುಕೂಲ ಆಗಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರ ಡಿಎ ಅನ್ನು ಶೇ 1ರಷ್ಟು ಹೆಚ್ಚಳಕ್ಕೆ ಸಂಪುಟ ಸಭೆ ನಿರ್ಧರಿಸಿದ್ದು ಈ ಹಿಂದೆ ಶೇಕಡ 4ರಷ್ಟಿದ್ದ ಡಿಎ ಇದೀಗ ಶೇಕಡ 5ಕ್ಕೆ ಹೆಚ್ಚಳವಾಗಿದೆ.
ಜುಲೈ 1ರಿಂದ ಪೂರ್ವಾನ್ವಯವಾಗಿ ಇದು ಜಾರಿಯಾಗಲಿದೆ. ಕೇಂದ್ರ ಸರ್ಕಾರದ ನೌಕರರಿಗೆ ತುಟ್ಟಿಭತ್ಯೆಯ ಹೆಚ್ಚುವರಿ ಕಂತು ಮತ್ತು ನಿವೃತ್ತ ನೌಕರರಿಗೂ ತುಟ್ಟಿಭತ್ಯೆ ಪರಿಹಾರ ಹಣ(ಡಿಆರ್‌) ನೀಡಲು ಸಭೆ ಒಪ್ಪಿಗೆ ನೀಡಿದೆ.
ತುಟ್ಟಿಭತ್ಯೆ ಹೆಚ್ಚಳದಿಂದ ಬೊಕ್ಕಸಕ್ಕೆ ವಾರ್ಷಿಕ ಮೂರು ಸಾವಿರ ಕೋಟಿ ರುಪಾಯಿ ಹೊರೆಯಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com