2002ರ ನರೋಡ ಗಾಮ್ ದಂಗೆ ಪ್ರಕರಣ: ಅಮಿತ್ ಶಾಗೆ ಕೋರ್ಟ್ ಸಮನ್ಸ್

2002ರಲ್ಲಿ ನಡೆದ ನರೋಡ ಗಾಮ್ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಾಕ್ಷಿದಾರನಾಗಿ...
ಅಮಿತ್ ಶಾ
ಅಮಿತ್ ಶಾ
ಅಹಮದಾಬಾದ್: 2002ರಲ್ಲಿ ನಡೆದ ನರೋಡ ಗಾಮ್ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಾಕ್ಷಿದಾರನಾಗಿ ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ವಿಶೇಷ ಎಸ್ಐಟಿ ಕೋರ್ಟ್ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.
11 ಮಂದಿಯನ್ನು ಬಲಿ ಪಡೆದ ನರೋಡ ದೊಂಬಿ ಪ್ರಕರಣದ ಪ್ರಮುಖ ಆರೋಪಿ, ಗುಜರಾತ್ ಮಾಜಿ ಸಚಿವ ಮಾಯಾ ಕೊಡ್ನಾನಿ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ಎಸ್ಐಟಿ ನ್ಯಾಯಾಧೀಶ ಪಿ ಬಿ ದೇಸಾಯಿ ಅವರು, ಸೆಪ್ಟೆಂಬರ್ 18ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಅಮಿತ್ ಶಾಗೆ ಸಮನ್ಸ್ ನೀಡಿದ್ದಾರೆ. ಅಲ್ಲದೆ ಒಂದು ವೇಳೆ ಶಾ ವಿಚಾರಣೆಗೆ ಹಾಜರಾಗದಿದ್ದರೆ ಮತ್ತೊಮ್ಮೆ ಸಮನ್ಸ್ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಮಿತ್ ಶಾ ಅವರು ಪ್ರಕರಣದಲ್ಲಿ ಕೊಡ್ನಾನಿ ಪರ ಸಾಕ್ಷಿದಾರರಾಗಿದ್ದು, ಕೊಡ್ನಾನಿ ಪರ ವಕೀಲ ಅಮಿತ್ ಪಟೇಲ್ ನೀಡಿದ ಬಿಜೆಪಿ ಅಧ್ಯಕ್ಷರ ಅಹಮದಾಬಾದ್ ನಿವಾಸದ ವಿಳಾಸಕ್ಕೆ ಕೋರ್ಟ್ ಸಮನ್ಸ್ ನೀಡಿದೆ.
ದೊಂಬಿ ನಡೆದಾಗ ತಾನು ಸ್ಥಳದಲ್ಲಿ ಇರಲಿಲ್ಲ ಎಂಬುದನ್ನು ಸಾಕ್ಷಾಧಾರ ಸಹಿತ ನಿರೂಪಿಸಲು ಅಮಿತ್ ಶಾ ಮತ್ತು ಇತರೆ 13 ಮಂದಿ ಸಾಕ್ಷಿಗಳನ್ನು ಕರೆಸಿಕೊಳ್ಳಲು ಅನುಮತಿ ನೀಡಬೇಕು ಎಂದು ಕೊಡ್ನಾನಿ ವಿಶೇಷ ಎಸ್ಐಟಿ ಕೋರ್ಟ್ ಗೆ ಮನವಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com