ಹಾವು ಹಿಡಿಯುವ ಕಾಯಕದಲ್ಲಿ ತೊಡಗಿರುವ ಚಾಲಕಿ ರಾಜಿ

ಈಕೆ ಕೆಲಸದಲ್ಲಿ ಲಿಂಗ ರೂಢಿ ನಿಯಮವನ್ನು ಮೀರಿ ನಿಂತ ಮಹಿಳೆ. ವ್ಯಾನಿನಲ್ಲಿ ಪ್ರಯಾಣಿಕರನ್ನು...
ಹಾವು ಹಿಡಿಯುವ ಹವ್ಯಾಸಿ ಜೆ.ಆರ್.ರಾಜಿ
ಹಾವು ಹಿಡಿಯುವ ಹವ್ಯಾಸಿ ಜೆ.ಆರ್.ರಾಜಿ
Updated on
ತಿರುವನಂತಪುರಂ: ಈಕೆ ಕೆಲಸದಲ್ಲಿ ಲಿಂಗ ರೂಢಿ ನಿಯಮವನ್ನು ಮೀರಿ ನಿಂತ ಮಹಿಳೆ. ವ್ಯಾನಿನಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು ಮತ್ತು ಹಾವು ಹಿಡಿಯುವ ಕೆಲಸವನ್ನು ಸಾಮಾನ್ಯವಾಗಿ ಪುರುಷರು ಮಾಡುತ್ತಾರೆ.
ಆದರೆ ಕೇರಳದ ಪಲೊಡ್ ಜಿಲ್ಲೆಯ ಪಚ ಗ್ರಾಮದ 33 ವರ್ಷದ ಜೆ.ಆರ್.ರಾಜಿ ಇಂದು ವ್ಯಾನ್ ಓಡಿಸುವ ಕೆಲಸ ಮಾಡದಿದ್ದರೆ ಹಾವು ಹಿಡಿಯುವ ಕಾಯಕದಲ್ಲಿ ಬ್ಯುಸಿಯಾಗಿರುತ್ತಿದ್ದರು. 
ಐದು ತಿಂಗಳ ಹಿಂದೆ ಹಾವು ಹಿಡಿಯುವುದರಲ್ಲಿ ರಾಜಿ ಸ್ವ ಉದ್ಯೋಗವನ್ನು ಕಂಡುಕೊಂಡಿದ್ದರು. ಇಲ್ಲಿಯವರೆಗೆ ಆಕೆ 74 ಹಾವುಗಳನ್ನು ಹಿಡಿದಿದ್ದಾರೆ. ತಿರುವನಂತಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜನರ ಜೀವನಕ್ಕೆ ಅಪಾಯವಾಗಿದ್ದ ಹಾವುಗಳನ್ನು ಹಿಡಿದಿದ್ದಾರೆ.
ಹಾವು ಹಿಡಿಯುವ ವೇಳೆ ಹಾವಿಗಾಗಲಿ, ರಾಜಿಗಾಗಲಿ ಇದುವರೆಗೆ ಯಾವುದೇ ತೊಂದರೆಯಾಗಿಲ್ಲವಂತೆ. ಈ ಸಂದರ್ಭದಲ್ಲಿ ನಾನು ವಿಶೇಷ ಜಾಗ್ರತೆ ವಹಿಸುತ್ತೇನೆ ಎಂದು ರಾಜಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಹೇಳಿದ್ದಾರೆ. ಹಾವು, ಸರೀಸೃಪಗಳ ಮೇಲೆ ರಾಜಿಗೆ ಬಾಲ್ಯದಲ್ಲಿಯೇ ಆಸಕ್ತಿ ಮೂಡಿತಂತೆ. ಹಾವುಗಳೆಂದರೆ ಭಯ ಸಣ್ಣವರಿದ್ದಾಗಿನಿಂದಲೂ ನನಗೆ ಇಲ್ಲ. ಚಿಕ್ಕ ಮಗುವಾಗಿದ್ದಾಗ ಹಳ್ಳಿಯಲ್ಲಿ ನಮ್ಮ ಮನೆ ಸುತ್ತಮುತ್ತ ಹರಿದಾಡುತ್ತಿದ್ದ ಹಾವುಗಳ ಹಿಂದೆ ಓಡಾಡುತ್ತಿದ್ದೆ ಎನ್ನುತ್ತಾರೆ.
ಹಾಡು ಹಿಡಿಯಲು ತಾವಾಗಿಯೇ ಪ್ರಯೋಗ ನಡೆಸುತ್ತಿದ್ದ ರಾಜಿ ಯೂ ಟ್ಯೂಬ್ ವಿಡಿಯೊದಲ್ಲಿ ಕೂಡ ಕೆಲವು ಟಿಪ್ಸ್ ಗಳನ್ನು ಪಡೆದಿದ್ದಾರೆ. ಕೇರಳದ ಹಾವು ರಕ್ಷಿಸುವ ಕಾರ್ಯಕರ್ತ ಬಾಬು ಪಲಲಯಂ ನಡೆಸಿದ ಒಂದು ದಿನದ ತರಬೇತಿಯಲ್ಲಿ ಭಾಗವಹಿಸಿದ್ದರಷ್ಟೆ. ಕಿಂಗ್ ಕೋಬ್ರಾ ಹಾವನ್ನು ಹೊರತುಪಡಿಸಿ ಬೇರೆಲ್ಲಾ ಹಾವುಗಳನ್ನು ರಾಜಿ ಹಿಡಿದಿದ್ದಾರೆ. 
ಹಾವನ್ನು ಕಂಡರೆ ಕಲ್ಲು ಎಸೆಯುವುದು ಅಥವಾ ಹೊಡೆದು ಸಾಯಿಸುವ ಪದ್ಧತಿ ಇನ್ನೂ ಜನರಲ್ಲಿದೆ. ನಾನು ಹಾವು ಹಿಡಿಯುವ ಮುನ್ನ ಜನದಟ್ಟಣೆಯನ್ನು ಮೊದಲು ನಿಯಂತ್ರಿಸುತ್ತೇನೆ ಎನ್ನುತ್ತಾರೆ. ಜನರು ಕೊಟ್ಟ ಹಣವೇ ಅವರ ಆದಾಯವಾಗಿದೆ. ಬಡವರ ಬಳಿ ನಾನು ಹಣ ತೆಗೆದುಕೊಳ್ಳುವುದಿಲ್ಲ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಾವು ಹಿಡಿದರೆ ಹಣ ಕೇಳುವುದಿಲ್ಲ. ನಾನು ಯಾವತ್ತೂ ಲಭ್ಯವಿರುತ್ತೇನೆ ಎನ್ನುವ ರಾಜಿ ಪ್ರತಿ ಸಲ ಹಾವು ಹಿಡಿದ ನಂತರ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿ ಹಾವನ್ನು ಅರಣ್ಯಕ್ಕೆ ಬಿಡುತ್ತಾರೆ.
ರಾಜಿಯವರ ಎರಡನೇ ಉದ್ಯೋಗ ವಾಹನ ಚಾಲನೆ. ಭಾರೀ ವಾಹನಗಳನ್ನು ಚಲಾಯಿಸಲು ಬ್ಯಾಡ್ಜ್ ಹೊಂದಿದ್ದಾರೆ. ಅವರ ಪತಿ ಅನಿಲ್ ಕುಮಾರ್ ಕೂಡ ವಾಹನ ಚಾಲಕ. ಇಬ್ಬರು ಶಾಲೆಗೆ ಹೋಗುವ ಮಕ್ಕಳಿದ್ದಾರೆ. 
ಮಹಿಳೆಯರಿಗೆ ಸುರಕ್ಷತೆಯಿದ್ದರೆ ವಾಹನ ಚಾಲನೆ ಅಥವಾ ಹಾವು ಹಿಡಿಯುವ ವೃತ್ತಿ ಕಷ್ಟವಲ್ಲ ಎಂದು ರಾಜಿ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com