ಮೊದಲು ಜನರ ಗೌರವ ಗಳಿಸಿ: ರಾಹುಲ್ ಗಾಂಧಿಗೆ ನಟ ರಿಷಿ ಕಪೂರ್ ಸಲಹೆ

ವಂಶಪಾರಂಪರ್ಯ ಕುರಿತಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ನೀಡಿದ್ದ ಹೇಳಿಕೆಯನ್ನು ಬಾಲಿವುಡ್ ನಟ ರಿಷಿ ಕಪೂರ್ ಅವರು ಬುಧವಾರ ತೀವ್ರವಾಗಿ ಟೀಕಿಸಿದ್ದಾರೆ...
ಬಾಲಿವುಡ್ ನಟ ರಿಷಿ ಕಪೂರ್
ಬಾಲಿವುಡ್ ನಟ ರಿಷಿ ಕಪೂರ್
ಮುಂಬೈ: ವಂಶಪಾರಂಪರ್ಯ ಕುರಿತಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ನೀಡಿದ್ದ ಹೇಳಿಕೆಯನ್ನು ಬಾಲಿವುಡ್ ನಟ ರಿಷಿ ಕಪೂರ್ ಅವರು ಬುಧವಾರ ತೀವ್ರವಾಗಿ ಟೀಕಿಸಿದ್ದಾರೆ. 
ರಾಹುಲ್ ಗಾಂಧಿ ಹೇಳಿಕೆ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ವಂಶಪಾರಂಪರ್ಯತೆ ಬಗ್ಗೆ ಸುಮ್ಮನೇ ಇಂತ ಬಾಲಿಶವಾದ ಭಾಷಣ ಮಾಡುವುದನ್ನು ಬಿಟ್ಟು, ಕಠಿಣ ಪರಿಶ್ರಮ ಪಟ್ಟು ಜನರ ಪ್ರೀತಿ ಹಾಗೂ ವಿಶ್ವಾಸವನ್ನು ರಾಹುಲ್ ಗಳಿಸಬೇಕು ಎಂದು ಸಲಹೆ ನೀಡಿದ್ದಾರೆ. 
106 ವರ್ಷಗಳ ಭಾರತೀಯ ಸಿನಿಮಾದಲ್ಲಿ ಕಪೂರ್ ವಂಶದ ಸೇವೆಯೇ ಸುಮಾರು 90 ವರ್ಷಗಳಷ್ಟಿದೆ. ದೇವರ ದಯೆದಿಂದ ಕಪೂರ್ ವಂಶ 4ನೇ ತಲೆಮಾರಿನ ಕುಡಿಯೂ ಬೆಳ್ಳಿ ತೆರೆಯಲ್ಲಿ ನಟೆಸುವುದನ್ನು ನೋಡಿದೆ. ಪ್ರತಿ ಪೀಳಿಗೆಯನ್ನೂ ಜನರೇ ಪೋಷಿಸುತ್ತಾ ಬಂದಿದ್ದಾರೆ. ಅದು ಸುಮ್ಮನೆಯ ಮಾತಲ್ಲ. ಕೇವಲ ಮೆರಿಟ್ ಆಧಾರದ ಮೇಲಷ್ಟೇ ಗೊತ್ತಾ ಎಂದು ರಾಹುಲ್ ಗೆ ಹೇಳಿದ್ದಾರೆ. 
ಪೃಥ್ವಿರಾಜ್ ಕಪೂರ್, ರಾಜ್ ಕಪೂರ್, ರಣಧೀರ್ ಕಪೂರ್ ಹಾಗೂ ರಣಬೀರ್ ಕಪೂರ್, ಕಪೂರ್ ಕುಟುಂಬದ ನಾಲ್ಕು ತಲೆಮಾರುಗಳ ನಟರಾಗಿದ್ದಾರೆ. ಕಪೂರ್ ವಂಶಸ್ಥರಂತೆಯೇ ಉಳಿದ ಕುಟುಂಬಗಳಲ್ಲೂ ಅವರವರ ಮಕ್ಕಳು, ಮೊಮ್ಮಕ್ಕಳು ಚಿತ್ರ ನಟರಾಗಿ ಬೆಳೆದಿದ್ದಾರೆ. ಗಮನಿಸಬೇಕಾದ ಅಂಶವೆಂದರೆ, 4 ತಲೆಮಾರುಗಳ ನಟರು ಜನರ ಪ್ರೀತಿ ಹಾಗೂ ಅಭಿಮಾನ, ಆಶೀರ್ವಾದಗಳಿಂದ ಮಾತ್ರವೇ ಗುರ್ತಿಸಲ್ಪಟ್ಟವರೇ ವಿನಃ ಯಾರೋ ಕಟ್ಟಿದ ಸಾಮ್ರಾಜ್ಯದಲ್ಲಿ ರಾಜರಾದವರಲ್ಲ. 
ವಂಶಪಾರಂಪರ್ಯದ ಬಗ್ಗೆ ಮಾತನಾಡುವುದಕ್ಕೆ ಅದಕ್ಕೊಂದು ಸಾಧನೆಯಿರಬೇಕು. ಸುಮ್ಮನೆ ವಂಶಪಾರಂಪರ್ಯವಿದೆ ಎಂದು ಏನೇನೊ ಹೇಳುವುದಲ್ಲ. ಹಾಗಾಗಿ ವಂಶ ಪಾರಂಪರ್ಯತೆ ಬಗ್ಗೆ ಸುಮ್ಮನೇ ಬುಲ್ ಶಿಟ್ ರೀತಿ ಜನರ ಬಗ್ಗೆ ಮಾತನಾಡಬೇಡಿ. ಮೊದಲು ಕಠಿಣ ಪರಿಶ್ರಮ ಪಟ್ಟು ಜನರ ಪ್ರೀತಿ ಹಾಗೂ ವಿಶ್ವಾಸವನ್ನು ಗಳಿಸಿ. ಬಲವಂತವಾಗಿ ಮತ್ತು ಗೂಂಡಾಗಿರಿಯಿಂದಲ್ಲ ಎಂದು ಹೇಳಿಕೊಂಡಿದ್ದಾರೆ. 
ನಿನ್ನೆಯಷ್ಟೇ ಅಮೆರಿಕಾದ ಬರ್'ಕ್ಲೆಯಲ್ಲಿನ ಪ್ರತಿಷ್ಠಿತ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆಗೆ ನಡೆಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿಯವರು, ಹೆಚ್ಚಿನ ದೇಶಗಳು ವಂಶಪಾರಂಪರ್ಯವಾಗಿ ನಡೆಯುತ್ತಿರುವುದು ಸಾಮಾನ್ಯವಾಗಿದೆ. ಭಾರತದಲ್ಲಿ ಕೂಡ ಅದು ಅಷ್ಟೇ ಸಾಮಾನ್ಯವಾಗಿದೆ. ಭಾರತದಲ್ಲಿನ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ವಂಶಪಾರಂಪರ್ಯ ನಡೆಯುತ್ತಿದೆ. ಅಖಿಲೇಶ್ ಯಾದವ್, ಸ್ಟಾಲಿನ್ ಮತ್ತು ನಟ ಅಭಿಷೇಕ್ ಬಚ್ಚನ್ ಕೂಡ ಸಿನಿಮಾ ರಂಗದಲ್ಲಿ ಇದಕ್ಕೆ ಉದಾಹರಣೆಯಾಗಿದ್ದಾರೆ. ಅದುದರಿಂದ ವಂಶಪಾರಂಪರ್ಯದ ಬಗ್ಗೆ ಮಾತಾಡುವಾಗ ಕೇವಲ ನನ್ನನ್ನು ಗುರಿ ಮಾಡಬೇಕೆ ಎಂದಿದ್ದರು. ರಾಹುಲ್ ಗಾಂಧಿಯವರ ಈ ಹೇಳಿಕೆಗೆ ಇದೀಗ ಸಾಕಷ್ಟು ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗತೊಡಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com