ಬುಲೆಟ್ ರೈಲು ಸಿಮ್ಯುಲೇಟರ್ ಘಟಕಕ್ಕೆ ಪ್ರಧಾನಿ ಮೋದಿ-ಜಪಾನ್ ಪ್ರಧಾನಿ ಶಿಂಜೋ ಅಬೆ ಭೇಟಿ!

ಭಾರತ ಮತ್ತು ಜಪಾನ್ ದೇಶಗಳ ನಡುವಿನ ಸ್ನೇಹದ ದ್ಯೋತಕವಾಗಿರುವ ಬುಲೆಟ್ ರೈಲು ಯೋಜನೆಗೆ ಗುರುವಾರ ಪ್ರಧಾನಿ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಚಾಲನೆ ನೀಡಲಿದ್ದಾರೆ.
ಸಿದಿ ಸೈಯ್ಯದ್ ನಿ ಜಾಲಿ ಮಸೀದಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಹಾಗೂ ಶಿಂಜೋ ಅಬೆ
ಸಿದಿ ಸೈಯ್ಯದ್ ನಿ ಜಾಲಿ ಮಸೀದಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಹಾಗೂ ಶಿಂಜೋ ಅಬೆ
Updated on
ಅಹ್ಮದಾಬಾದ್: ಭಾರತ ಮತ್ತು ಜಪಾನ್ ದೇಶಗಳ ನಡುವಿನ ಸ್ನೇಹದ ದ್ಯೋತಕವಾಗಿರುವ ಬುಲೆಟ್ ರೈಲು ಯೋಜನೆಗೆ ಗುರುವಾರ ಪ್ರಧಾನಿ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಚಾಲನೆ ನೀಡಲಿದ್ದಾರೆ.
ಇದಕ್ಕಾಗಿ ಅಹ್ಮದಾಬಾದ್ ನ ಮಹತ್ಮ ಮಂದಿರ್ ಎಕ್ಸಿಬಿಷನ್ ಲ್ಲಿ ವಿಶೇಷವಾಗಿ ನಿರ್ಮಾಣ ಮಾಡಲಾಗಿರುವ ಬುಲೆಟ್ ರೈಲು ಸಿಮ್ಯುಲೇಟರ್ ಘಟಕಕ್ಕೆ ನಾಳೆ ಪ್ರಧಾನಿ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು  ಭೇಟಿ ನೀಡಲಿದ್ದಾರೆ. ಸಿಮ್ಯುಲೇಟರ್ ಘಟಕಕ್ಕೆ ಚಾಲನೆ ನೀಡುವ ಮೂಲಕ ಇಂಡೋ-ಜಪಾನ್ ಸ್ನೇಹದ ಪ್ರತೀಕವಾದ ಬುಲೆಟ್ ರೈಲು ಯೋಜನೆಗೆ ಉಭಯ ವಿಶ್ವ ನಾಯಕರು ಚಾಲನೆ ನೀಡಲಿದ್ದಾರೆ.

ಈ ವಿಶೇಷ ಸಿಮ್ಯುಲೇಟರ್ ಘಟಕದಲ್ಲಿ ಬುಲೆಟ್ ರೈಲು ಸಿಬ್ಬಂದಿಗಳಿಗೆ ರೈಲು ಓಡಿಸುವ ಕುರಿತು ತರಬೇತಿ ನೀಡಲಾಗುತ್ತದೆ. ಈಗಾಗಲೇ ಇದಕ್ಕಾಗಿ ಜಪಾನ್ ನಿಂದ ಕೆಲ ನುರಿತ ತಜ್ಞರು ಆಗಮಿಸಿದ್ದು, ಕೆಲವೇ ದಿನಗಳಲ್ಲಿ ಬುಲೆಟ್  ರೈಲು ಕಾಮಗಾರಿ ಆರಂಭಗೊಳ್ಳಲಿದೆ.

ಅಬೆ ದಂಪತಿಗೆ ವಿಶೇಷ ಔತಣಕೂಟ
ಇನ್ನು ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ಅವರ ಪತ್ನಿ ಅಕೀ ಅಬೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಔತಣಕೂಟ ವೇರ್ಪಡಿಸಿದ್ದು, ಅಹ್ಮದಾಬಾದ್ ನ ಪ್ರತಿಷ್ಚಿತ  ಹೌಸ್ ಆಫ್ ಮಂಗಲದಾಸ್ ಹೆರಿಟೇಜ್ ಹೊಟೇಲ್ ನಲ್ಲಿ ವಿಶೇಷ ಔತಣಕೂಟ ಏರ್ಪಡಿಸಲಾಗಿದೆ. ಗುಜರಾತ್ ರಾಜ್ಯದ ಸಂಸ್ಕೃತಿ ಬಿಂಬಿಸುವ ತಾಮ್ರದ ಪಾತ್ರೆಗಳಲ್ಲಿ ಜಪಾನ್ ದೇಶದ  ಪ್ರಧಾನಿ ಶಿಂಜೋ ಅಬೆ ಹಾಗೂ ಅವರ ಪತ್ನಿ  ಅಕೀ ಅಬೆ ಅವರಿಗಾಗಿ ವೈವಿಧ್ಯಮಯ ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ.

ಹೊಟೇಲಿನ ಅಗಶಿಯೆ ಟೆರೇಸ್ ರೆಸ್ಟೋರೆಂಟ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶೇಷ ಔತಣಕೂಟ ಏರ್ಪಡಿಸಿದ್ದು, ಇಂದು ರಾತ್ರಿ ಜಪಾನಿನ ಪ್ರಧಾನಿ ಮತ್ತು ಪ್ರಥಮ ಮಹಿಳೆಗೆ ಇಲ್ಲಿ ವಿಶೇಷ ಔತಣ ಸತ್ಕಾರ  ನೀಡಲಿದ್ದಾರೆ.

ಔತಣದ ಮೆನುವಿನಲ್ಲಿ 30ಕ್ಕೂ ಹೆಚ್ಚು ಖಾದ್ಯ ವೈವಿಧ್ಯಗಳಿದ್ದು, ಖಮನ್ ಧೋಕ್ಲ, ರಸ್ಪತ್ರ ಮತ್ತು ಗೊಟಾ ಫ್ರಿಟ್ಟರ್ಸ್, ಮುಷಿ ರೈಸ್ ಕಿಚ್ಡಿ,  ಕಢಿ, ಭರೇಲಾ-ಕರೇಲಾ-ಡುಂಗ್ರಿ ಎಂಬ ಹೆಸರಿನ ಹಾಗಲಕಾಯಿ, ಈರುಳ್ಳಿ ಪಲ್ಯ ಹಾಗೂ  ಭಕ್ರಿ,  ರೊಟ್ಲ ಮತ್ತು ರೋಟಿ ಹಾಗೂ ಪೂರಿಗಳು ಮೆನುವಿನಲ್ಲಿ ಇರಲಿವೆ. ಇದಲ್ಲದೆ ಸೇವ್-ಟೊಮ್ಯಾಟೋ, ಮಿಶ್ರ ತರಕಾರಿ ಉಂಧಿಯು, ಬೆಳ್ಳುಳ್ಳಿ ಸೇರಿಸಿ ತಯಾರಿಸಲಾದ ಬಟಾಟೆ ಪಲ್ಯ- ಲಸನಿಯ ಬಟೇಟ, ದಾಲ್, ರೈತಾ, ಶ್ರೀಖಂಡ್  ಹಾಗೂ ಮಸಾಲ ಮಜ್ಜಿಗೆ ಕೂಡ ಇರುತ್ತದೆ. ಇನ್ನು ಸಿಹಿ ಪದಾರ್ಥಗಳ ಮೆನುವಿನಲ್ಲಿ ಮೊಹಂತ್ ಲಾಲ್, ಹಲ್ವ ಹಾಗೂ ಜಿಲೇಬಿ ಇದೆ ಎಂದು ತಿಳಿದುಬಂದಿದೆ.

ವಿಶ್ವ ನಾಯಕರ ಔತಣಕೂಟಕ್ಕಾಗಿ ಎರಡೂ ದೇಶಗಳ ಸರ್ಕಾರಗಳಿಂದ ನೇಮಿಸಲ್ಪಟ್ಟ ಇಬ್ಬರು ನುರಿತ ಪಾಕ ಪ್ರವೀಣರು ಅಡುಗೆ ತಯಾರಿಯ ಮೇಲ್ವಿಚಾರಣೆ ನಡೆಸಿದ್ದಾರೆ. ಇಲ್ಲಿನ ಸಿಬ್ಬಂದಿ ಸಾಂಪ್ರದಾಯಿಕ ಧೋತಿ, ಕುರ್ತಾ,  ಮುಂಡಾಸು ಧರಿಸಿ ಅತಿಥಿಗಳಿಗೆ ಉಣಬಡಿಸಲು ಸಜ್ಜಾಗಿದ್ದಾರೆ.

ಔತಣ ಕೂಟದ ಬಳಿಕ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು, ಇಲ್ಲಿನ ಪಂಚತಾರ ಹ್ಯಾಟ್ಟ್  ಹೊಟೇಲಿನಲ್ಲಿ ತಂಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನ ರಾಜಭವನದಲ್ಲಿ ತಂಗಲಿದ್ದಾರೆ. ಗುರುವಾರ ವಿವಿಧ  ಕಾರ್ಯಕ್ರಮಗಳಲ್ಲಿ ಉಭಯ ನಾಯಕರು ಪಾಲ್ಗೊಳ್ಳಲಿದ್ದು, ನಾಯಕರ ಅಂದಿನ ಊಟ ಕೂಡ ಸಸ್ಯಾಹಾರಿಯಾಗಲಿದೆ. ಇಲ್ಲಿನ ಮಹಾತ್ಮ ಮಂದಿರ್ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬಳಿಕ ಗುಜರಾತ್  ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಇಬ್ಬರು ಪ್ರಧಾನಿಗಳಿಗೂ ರಾತ್ರಿ ಔತಣಕೂಟ ಏರ್ಪಡಿಸಲಿದ್ದಾರೆ.=

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com