ಬುಲೆಟ್ ರೈಲು ಒಂದೇ ಭಾರತದ ಆದ್ಯತೆಯಾಗಿರಬಾರದು: ಕಾಂಗ್ರೆಸ್

ಜಪಾನ್ ಪ್ರಧಾನಿ ಶಿಂಜೋ ಅಬೆ ಅವರ ಭಾರತ ಪ್ರವಾಸದ ಸಂದರ್ಭದಲ್ಲಿ ಬುಲೆಟ್ ರೈಲು ಒಂದೇ ಭಾರತದ ಆಧ್ಯತೆಯಾಗಿರಬಾರದು ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
ಪ್ರಧಾನಿ ಮೋದಿ-ಜಪಾನ್ ಪ್ರಧಾನಿ ಅಬೆ
ಪ್ರಧಾನಿ ಮೋದಿ-ಜಪಾನ್ ಪ್ರಧಾನಿ ಅಬೆ
ನವದೆಹಲಿ: ಜಪಾನ್ ಪ್ರಧಾನಿ ಶಿಂಜೋ ಅಬೆ ಅವರ ಭಾರತ ಪ್ರವಾಸದ ಸಂದರ್ಭದಲ್ಲಿ ಬುಲೆಟ್ ರೈಲು ಒಂದೇ ಭಾರತದ ಆಧ್ಯತೆಯಾಗಿರಬಾರದು ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
ಬುಲೆಟ್ ರೈಲಿಗೆ ಆಧ್ಯತೆ ನೀಡುತ್ತಿರುವ ಪ್ರಧಾನಿ ಮೋದಿ ಭಾರತ-ಜಪಾನ್ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಗುರುವಾರ ಕಾಂಗ್ರೆಸ್ ಆರೋಪಿಸಿದೆ. ಅತ್ತ ಅಹ್ಮದಾಬಾದ್ ನಲ್ಲಿ ಜಪಾನ್  ಪ್ರಧಾನಿ ಅಬೆ ಮತ್ತು ಭಾರತ ಪ್ರಧಾನಿ ಮೋದಿ ಬುಲೆಟ್ ರೈಲು ಯೋಜನೆಗೆ ಚಾಲನೆ ನೀಡುತ್ತಿದ್ದಂತೆಯೇ ಇತ್ತ ಎನ್ ಡಿಎ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಅವರು, ಪ್ರಧಾನಿ ನರೇಂದ್ರ  ಮೋದಿ ಅವರಿಗೆ ದ್ವಿಪಕ್ಷೀಯ ರಕ್ಷಣಾ ಮಾತುಕತೆಗಿಂತ ಕ್ಯಾಮೆರಾಗಳಿಗೆ ಪೋಸ್ ನೀಡುವುದೇ ಮುಖ್ಯವಾಗಿ ಹೋಗಿದೆ ಎಂದು ಟೀಕಿಸಿದ್ದಾರೆ.

ಬುಲೆಟ್ ರೈಲು ಯೋಜನೆ ಕುರಿತಂತೆ ಮಾತನಾಡಿದ ಅವರು, ಭಾರತಕ್ಕೆ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಭೇಟಿ ನೀಡಿರುವ ಈ ಸಂದರ್ಭವನ್ನು ಭಾರತ ಪರಿಣಾಮಕಾರಿಯಾಗಿ ಬಳಸಿಕೊಂಡು ದ್ವಿಪಕ್ಷೀಯ ರಕ್ಷಣಾ  ಕಾರ್ಯತಂತ್ರಗಳ ಮಾತುಕತೆಗೆ ಆಧ್ಯತೆ ನೀಡಬೇಕು. ಆ ಮೂಲಕ ಜಪಾನ್ ನೊಂದಿಗೆ ಹಲವು ಮಹತ್ವದ ಒಪ್ಪಂದಗಳನ್ನು ಭಾರತ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಭಾರತ ಮತ್ತು ಜಪಾನ್ ದೇಶಗಳ ನಡುವೆ ಸಾಕಷ್ಟು ಗಂಭೀರವ ವಿಚಾರಗಳ ಕುರಿತು ಮಾತುಕತೆಯಾಗಬೇಕಿದ್ದು, ಬುಲೆಟ್ ರೈಲು ಯೋಜನೆಯೊಂದಕ್ಕೇ ಭಾರತ ಸೀಮಿತವಾಗಿರಬಾರದು. ಈ ಹಿಂದೆ ಯುಪಿಎ ಅಧಿಕಾರಿದಲ್ಲಿದ್ದ  ಸಂದರ್ಭದಲ್ಲಿ ಭಾರತ ಮತ್ತು ಜಪಾನ್ ದೇಶಗಳ ನಡುವೆ ಸಾಕಷ್ಟು ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಯುಪಿಎ ಅವಧಿಯಲ್ಲಿ ದೇಶದ ರಕ್ಷಣೆ ಹಾಗೂ ಕಾರ್ಯತಂತ್ರ ಯೋಜನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತು. ಆದರೆ  ಪ್ರಸ್ತುತ ಎನ್ ಡಿಎ ಸರ್ಕಾರ ಇವುಗಳನ್ನು ಕಡೆಗಣಿಸಿ ಹೆಚ್ಚೆಚ್ಚು ಫೋಟೋಗಳಿಗೆ ಪೋಸ್ ನೀಡುವ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರನ್ನು ಇಂಪ್ರೆಸ್ ಮಾಡಲು  ಪ್ರಯತ್ನಿಸುತ್ತಿದ್ದಾರೆ ಎಂದು ಆನಂದ್ ಶರ್ಮಾ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com