ಸಿಂಧೂ ನದಿ ಒಪ್ಪಂದ: ವಿಶ್ವಬ್ಯಾಂಕ್ ನಲ್ಲಿ ಭಾರತ-ಪಾಕ್ ನಡುವೆ ಇಂದು ಮತ್ತೊಂದು ಸುತ್ತಿನ ಮಾತುಕತೆ

ಸಿಂಧೂ ನದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ವಿಶ್ವಬ್ಯಾಂಕ್ ನಲ್ಲಿ ಭಾರತ-ಪಾಕ್ ನಡುವೆ ಇಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.
ಸಿಂಧೂ ನದಿ ಒಪ್ಪಂದ: ವಿಶ್ವಬ್ಯಾಂಕ್ ನಲ್ಲಿ ಭಾರತ-ಪಾಕ್ ನಡುವೆ ಇಂದು ಮತ್ತೊಂದು ಸುತ್ತಿನ ಮಾತುಕತೆ
ಸಿಂಧೂ ನದಿ ಒಪ್ಪಂದ: ವಿಶ್ವಬ್ಯಾಂಕ್ ನಲ್ಲಿ ಭಾರತ-ಪಾಕ್ ನಡುವೆ ಇಂದು ಮತ್ತೊಂದು ಸುತ್ತಿನ ಮಾತುಕತೆ
ವಾಷಿಂಗ್ ಟನ್: ಸಿಂಧೂ ನದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ವಿಶ್ವಬ್ಯಾಂಕ್ ನಲ್ಲಿ ಭಾರತ-ಪಾಕ್ ನಡುವೆ ಇಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. 
ಒಂದು ತಿಂಗಳ ಅವಧಿಯಲ್ಲಿ ಇದು 2 ನೇ ಬಾರಿ ಭಾರತ-ಪಾಕಿಸ್ತಾನದ ನಡುವೆ ಸಿಂಧೂ ನದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದ್ದು, ಸೆಪ್ಟೆಂಬರ್ ನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಆ.2 ರಂದು ತೀರ್ಮಾನಿಸಲಾಗಿತ್ತು. 
ಭಾರತ ಜಮ್ಮು-ಕಾಶ್ಮೀರದಲ್ಲಿ ನಿರ್ಮಿಸುತ್ತಿರುವ ಕಿಶನ್ ಗಂಗಾ, ರಾಟ್ಲೆ ಜಲವಿದ್ಯುತ್ ಯೋಜನೆಗಳ ಬಗ್ಗೆ ತಗಾದೆ ತೆಗೆದಿರುವ ಪಾಕಿಸ್ತಾನ, ಭಾರತದ ಯೋಜನೆಗಳು 1960 ರ ಸಿಂಧೂ ನದಿ ಒಪ್ಪಂದವನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿದೆ. ಆಗಸ್ಟ್ ತಿಂಗಳಲ್ಲಿ ನಡೆದಿದ್ದ ಮಾತುಕತೆಯಲ್ಲಿ ಈ ವಿವಾದದ ಸಂಬಂಧ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದ್ದ ವಿಶ್ವಬ್ಯಾಂಕ್ ಸೆಪ್ಟೆಂಬರ್ 14-`15 ರಂದು ಮತ್ತೊಂದು ಹಂತದ ಮಾತುಕತೆ ನಡೆಯಲಿದೆ ಎಂದು ಹೇಳಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com