ಸಂಸದ ಮಹಂತ್ ಚಾಂದ್ ನಾಥ್ (ಸಂಗ್ರಹ ಚಿತ್ರ)
ದೇಶ
ಬಿಜೆಪಿ ರಾಜಸ್ತಾನ ಸಂಸದ ಮಹಂತ್ ಚಾಂದ್ ನಾಥ್ ನಿಧನ
ಬಿಜೆಪಿ ರಾಜಸ್ತಾನ ಸಂಸದ ಮಹಂತ್ ಚಾಂದ್ ನಾಥ್ ನಿಧನರಾಗಿದ್ದು, ಅವರಿಗೆ 61 ವರ್ಷ ವಯಸ್ಸಾಗಿತ್ತು.
ಜೈಪುರ: ಬಿಜೆಪಿ ರಾಜಸ್ತಾನ ಸಂಸದ ಮಹಂತ್ ಚಾಂದ್ ನಾಥ್ ನಿಧನರಾಗಿದ್ದು, ಅವರಿಗೆ 61 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಮಹಂತ್ ಚಾಂದ್ ನಾಥ್ ಅವರು ಶನಿವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಹರ್ಯಾಣದ ರೋಹ್ಟಕ್ ನಲ್ಲಿ ಮಹಂತ್ ಚಾಂದ್ ನಾಥ್ ಅವರ ಮಠವಿದ್ದು, ಅಲ್ಲಿಯೇ ಅವರ ಅಂತಿಮ ವಿಧಿವಿಧಾನ ನೆರವೇರಲಿದೆ ಎಂದು ತಿಳಿದುಬಂದಿದೆ. ಮಹಂತ್ ಚಾಂದ್ ನಾಥ್ ನಿಧನದಿಂದಾಗಿ ಅವರ ನೇತೃತ್ವದಲ್ಲಿ ಇಂದು ರಾಜಸ್ತಾನದಲ್ಲಿ ನಡೆಯ ಬೇಕಿದ್ದ ಎಲ್ಲ ಕಾರ್ಯಕ್ರಮಗಳು ರದ್ದಾಗಿವೆ.
ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನವಾದ ಇಂದು ವಿವಿಧ ಜಿಲ್ಲೆಗಳಲ್ಲಿ ಸಂಸದರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಆಯೋಜನೆಯಾಗಿತ್ತು. ಆದರೆ ಆದರೆ ಆಳ್ವಾರ್ ಮಹಂತ್ ಚಾಂದ್ ನಾಥ್ ನಿಧನದಿಂದಾಗಿ ಅವರ ಕ್ಷೇತ್ರ ರಾಜಸ್ತಾನದ ಆಳ್ವಾರ್ ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಗಳು ರದ್ದಾಗಿವೆ.
ಹಿಂದುತ್ವ ದ ಪ್ರಬಲ ಪ್ರತಿಪಾದಕರಾಗಿದ್ದ ಮಹಂತ್ ಚಾಂದ್ ನಾಥ್ ಅವರು ಮಸ್ಟ್ ವಿವಿಯ ಉಪಕುಲಪತಿಗಳೂ ಕೂಡಾಗಿದ್ದು, 2014ರಲ್ಲಿ ರಾಜಸ್ತಾನದ ಬೆಹ್ರೋರ್ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.

Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ