ಫೇಸ್'ಬುಕ್ ಗೀಳು: ಸಹೋದರ ಬೈದನೆಂದು ಆತ್ಮಹತ್ಯೆಗೆ ಶರಣಾದ ಯುವತಿ

ಸದಾಕಾಲ ಫೇಸ್'ಬುಕ್ ನಲ್ಲೇ ತೊಡಗಿಕೊಂಡಿರುತ್ತಾಳೆಂದು ಸಹೋದರ ಬೈದಿದ್ದಕ್ಕೆ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೋಲ್ಕತಾ: ಸದಾಕಾಲ ಫೇಸ್'ಬುಕ್ ನಲ್ಲೇ ತೊಡಗಿಕೊಂಡಿರುತ್ತಾಳೆಂದು ಸಹೋದರ ಬೈದಿದ್ದಕ್ಕೆ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. 
11ನೇ ತರಗತಿಯ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದಾಳೆ. 24 ಪರಗಣ ಜಿಲ್ಲೆಯ ಮಾನ್ಸಬರಿ ಪ್ರದೇಶದ ನಿವಾಸಿಯಾಗಿರುವ ಯುವತಿ ಶುಕ್ರವಾರ ರಾತ್ರಿ ಮನೆಯಲ್ಲಿನ ರೂಮಿನಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 
ಮೊಬೈಲ್ ಕೈಗೆ ಬಂದಾಗಿನಿಂದಲೂ ಯುವತಿ ದಿನನಿತ್ಯ ಫೇಸ್'ಬುಕ್ ನಲ್ಲೇ ಕಾಲ ಕಳೆಯುತ್ತಿದ್ದಳೂ. ಸರಿಯಾಗಿ ಊಟ ಸೇವಿಸುತ್ತಿರಲಿಲ್ಲ. ಓದವ ಕಡೆಗೂ ಆಸಕ್ತಿಯನ್ನು ಕಳೆದುಕೊಂಡಿದ್ದರು. ಸರಿಯಾಗಿ ಕಾಲೇಜಿಗೂ ಹೋಗುತ್ತಿರಲಿಲ್ಲ. ತಂಗಿಯ ಈ ನಡವಳಿಕೆಯನ್ನು ಕಂಡ ಹಿರಿಯ ಸಹೋದರ ಆಕೆಯನ್ನು ಶುಕ್ರವಾರ ಬೆಳಿಗ್ಗೆ ಬೈದಿದ್ದಾನೆ. 
ಸಂಬಂಧಿಕರೊಬ್ಬರನ್ನು ಭೇಟಿಯಾಗಲೆಂದು ಮನೆಯವರು ಆಸ್ಪತ್ರೆಗೆ ಹೋಗಿದ್ದಾರೆ. ಈ ವೇಳೆ ಒಂಟಿಯಾಗಿದ್ದ ಯುವತಿ ತನ್ನ ರೂಮಿನ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. 
ಕುಟುಂಬಸ್ಥರು ಆಸ್ಪತ್ರೆಯಿಂದ ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ಬಂದಾಗ ಯುವತಿ ಸಾವನ್ನಪ್ಪಿರುವುದು ತಿಳಿದುಬಂದಿತ್ತು ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ. 
ಇನ್ನು ಯುವತಿ ಸಾಯುವುದಕ್ಕೂ ಮುನ್ನ ತನ್ನ ವಾಟ್ಸ್ಅಪ್ ಸ್ಟೇಟಸ್'ನ್ನು 'ಐ ಆ್ಯಮ್ ಡೆಡ್' (ನಾನು ಸತ್ತೆ) ಎಂದು ಬದಲಾಯಿಸಿದ್ದಾಳೆ. ಇದಲ್ಲದೆ, ಫೇಸ್ ಬುಕ್ ನಲ್ಲೂ ಸ್ಟೇಟಸ್ ಹಾಕಿರುವ ಯುವತಿ ನನ್ನ ಜೀವನದ ಎಲ್ಲಾ ವಿಷಯಗಳ ಮೇಲೆ ನಾನು ಆಸಕ್ತಿ ಕಳೆದುಕೊಂಡಿದ್ದೇನೆಂದು ಬರೆದುಕೊಂಡಿದ್ದಾಳೆ. 
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪಶ್ಚಿಮ ಬಂಗಾಳದ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com