ಹಿಂದೂ-ಮುಸ್ಲಿಂರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಲು ಮಮತಾ ಬ್ಯಾನರ್ಜಿ ಯೋಜನೆ: ಆರ್ಎಸ್ಎಸ್

ಹಬ್ಬಗಳ ಹೆಸರಿನಲ್ಲಿ ರಾಜಕೀಯ ಮಾಡದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ರಾಷ್ಟ್ರೀಯ ಸ್ವಯಂಸೇವಾ...
ಇಂದ್ರೇಶ್ ಕುಮಾರ್
ಇಂದ್ರೇಶ್ ಕುಮಾರ್
ಅಯೋಧ್ಯ(ಉತ್ತರಪ್ರದೇಶ): ಹಬ್ಬಗಳ ಹೆಸರಿನಲ್ಲಿ ರಾಜಕೀಯ ಮಾಡದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್ಎಸ್ಎಸ್) ನಾಯಕ ಇಂದ್ರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. 
ದುರ್ಗಾ ಪೂಜೆ ಮತ್ತು ಮೊಹರಂ ಹಬ್ಬಗಳಂದು ಶಾಂತಿ ಕದಡುವ ಕೆಲಸ ಮಾಡಬೇಡಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆರ್ಎಸ್ಎಸ್, ಹಿಂದೂಪರ ಸಂಘಟನೆ ಹಾಗೂ ಮುಸ್ಲಿಂರಿಗೆ ಎಚ್ಚರಿಕೆ ನೀಡುವ ಮೂಲಕ ಹಿಂದೂ-ಮುಸ್ಲಿಂರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಲು ಯೋಜಿಸುತ್ತಿದ್ದಾರೆ ಎಂದು ಇಂದ್ರೇಶ್ ಹೇಳಿದ್ದಾರೆ. 
ವಿಜಯ ದಶಮಿ ಹಾಗೂ ಮೊಹರಂ ಹಬ್ಬದ ಒಂದಾಗಿ ಬರುವುದರಿಂದ ಹಿಂದೂ-ಮುಸ್ಲಿಂರಿಗೆ ಶಾಂತಿ ಕದಡದಂತೆ ಸೂಚನೆ ನೀಡುವ ಮೂಲಕ ಹಿಂದೂ ಮುಸ್ಲಿಂರಲ್ಲಿ ಸಾಮರನ್ಯ ಕದಡಲು ಯೋಜಿಸುತ್ತಿದ್ದಾರೆ. ಇನ್ನು ಮಮತಾ ಬ್ಯಾನರ್ಜಿ ಅವರ ಹೇಳಿಕೆ ಹಾಸ್ಯಾಸ್ಪದ ಎಂದು ಇಂದ್ರೇಶ್ ಕುಮಾರ್ ಹೇಳಿದ್ದಾರೆ. 
ಇದೇ ವೇಳೆ ವಿಜಯ ದಶಮಿ ದಿನ ದುರ್ಗಾ ಮೂರ್ತಿ ವಿಸರ್ಜಿಸುವುದರ ಮೇಲೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಮಮತಾ ಬ್ಯಾನರ್ಜಿ, ಮುಹರಂ ಹಬ್ಬದ ಸಂದರ್ಭದಲ್ಲಿ, ಅಂದರೆ ವಿಜಯ ದಶಮಿಯ ಮರುದಿವಸ ದುರ್ಗಾ ಮೂರ್ತಿ ವಿಸರ್ಜನೆ ಬೇಡ ಎಂದು ಪೂಜೆಯ ಸಂಘಟಕರಲ್ಲಿ ಹೇಳಿದ್ದೇವೆ. ವಿಜಯ ದಶಮಿಯಂದು ಮೂರ್ತಿ ವಿಸರ್ಜನೆ ಮಾಡುವುದರ ಮೇಲೆ ನಿರ್ಬಂಧ ವಿಧಿಸಿಲ್ಲ. ಮತ್ತೊಂದು ಧರ್ಮದವರು ಪ್ರಾರ್ಥನೆಯಲ್ಲಿ ನಿರತರಾಗಿರುವ ಸಂದರ್ಭ ಕೇವಲ ನಾಲ್ಕು ಗಂಟೆ ಮಾತ್ರ ಮೂರ್ತಿ ವಿಸರ್ಜನೆ ಮಾಡಬಾರದು ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com