ಐಎಎಫ್ ಮಾರ್ಷಲ್ ಅರ್ಜನ್ ಸಿಂಗ್ ನಿಧನಕ್ಕೆ ಗಣ್ಯರ ಸಂತಾಪ!

ಹೃದಯಾಘಾತಕ್ಕೆ ಒಳಗಾಗಿ ಶನಿವಾರ ನಿಧನರಾದ ಐಎಎಫ್ ಮಾರ್ಷಲ್ ಅರ್ಜನ್ ಸಿಂಗ್ ಅವರಿಗೆ ದೇಶದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಎಎಫ್ ಮಾರ್ಷಲ್ ಅರ್ಜನ್ ಸಿಂಗ್ ಹಾಗೂ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ಎಎಫ್ ಮಾರ್ಷಲ್ ಅರ್ಜನ್ ಸಿಂಗ್ ಹಾಗೂ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ನವದೆಹಲಿ: ಹೃದಯಾಘಾತಕ್ಕೆ ಒಳಗಾಗಿ ಶನಿವಾರ ನಿಧನರಾದ ಐಎಎಫ್ ಮಾರ್ಷಲ್ ಅರ್ಜನ್ ಸಿಂಗ್ ಅವರಿಗೆ ದೇಶದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಟ್ವಿಟರ್ ನಲ್ಲಿ ಅರ್ಜನ್ ಸಿಂಗ್ ಸೇವೆಯನ್ನು ಸ್ಮರಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಅರ್ಜನ್ ಸಿಂಗ್ ವಾಯುಪಡೆಯ ಮಹಾನ್ ಯೋಧರಾಗಿದ್ದರು. ಅವರ ಸಾವಿನಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ.  ದೇವರು ಅವರ ಆತ್ಮಕ್ಕೆ ನೀಡಲಿ ಹಾಗೂ ಅವರ ಕುಟುಂಬಕ್ಕೆ ಸಾವಿನ ನೋವನ್ನು ತಡೆಯು ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

ಅಂತೆಯೇ ಪ್ರಧಾನಿ ಮೋದಿ ಕೂಡ ಟ್ವೀಟ್ ಮಾಡಿದ್ದು, ಭಾರತ ಎಂದಿಗೂ ಎಎಫ್ ಮಾರ್ಷಲ್ ಅರ್ಜನ್ ಸಿಂಗ್ ಅವರ ಸೇವೆಯನ್ನು ಮರೆಯುವುದಿಲ್ಲ. 1965ರ ಯುದ್ಧದಲ್ಲಿ ಅವರ ನಾಯಕತ್ವ ನಿರ್ಣಾಯಕವಾಗಿತ್ತು. ಅವರ ಸಾವಿನಿಂದ  ದೇಶಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.

ಇನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿ, ದೇಶ ಮಹಾನ್ ಯೋಧನನ್ನು ಕಳೆದುಕೊಂಡಿದ್ದು, ಇದು ತುಂಬಲಾರದ ನಷ್ಟ. ಸಾಕಷ್ಟು ಯುದ್ಧಗಳಲ್ಲಿ ಅವರ ಪಾಲ್ಗೊಂಡಿದ್ದರು.  ಅವರ ಶಿಸ್ತು ಹಾಗೂ ಅವರ ಗುಣಗಳು ಇಂದಿನ ಪೀಳಿಗೆಯ ಯೋಧರಿಗೆ ಸ್ಪೂರ್ತಿಯಾಗಿದ್ದು, ಮುಂದಿನ ಪೀಳಿಗೆಯ ಯೋಧರಿಗೂ ಅರ್ಜನ್ ಸಿಂಗ್ ಮಾದರಿಯಾಗಲಿದ್ದಾರೆ. ಸರ್ಕಾರದ ವತಿಯಿಂದ ಅವರ ಸಿಗಬೇಕಿರುವ ಎಲ್ಲ  ಗೌರವಗಳನ್ನು ಸಂಪೂರ್ಣವಾಗಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

98 ವರ್ಷದ ಅರ್ಜನ್ ಸಿಂಗ್ ಅವರು ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದರು. 1965ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಭಾರತ ಮೇಲುಗೈ ಸಾಧಿಸಲು ಅರ್ಜನ್ ಸಿಂಗ್ ನೇತೃತ್ವದ ಭಾರತೀಯ ವಾಯುಪಡೆ  ಕಾರಣವಾಗಿತ್ತು. ಅಂದಿನ ಕದನದಲ್ಲಿ ಅರ್ಜನ್ ಸಿಂಗ್ ನಿರ್ಣಾಯಕ ಪಾತ್ರವಹಿಸಿ ಭಾರತ ಮೇಲುಗೈ ಸಾಧಿಸಲು ನೆರವಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com