ಯುಎನ್ ಜಿಎ ಅಧಿವೇಶನದಲ್ಲಿ ಪಾಕ್ ವಿದೇಶಾಂಗ ಸಚಿವ-ಸುಷ್ಮಾ ಸ್ವರಾಜ್ ಮುಖಾಮುಖಿ

ಮುಂದಿನ ವಾರ ವಿಶ್ವಸಂಸ್ಥೆಯ 72 ನೇ ಮಹಾಸಭೆ (ಯುಎನ್ ಜಿಎ) ನಡೆಯಲಿದ್ದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನ ವಿದೇಶಾಂಗ ಸಚಿವ ಖಾವಾಜಾ ಮುಖಾಮುಖಿಯಾಗಲಿದ್ದಾರೆ.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ನವದೆಹಲಿ: ಮುಂದಿನ ವಾರ ವಿಶ್ವಸಂಸ್ಥೆಯ 72 ನೇ ಮಹಾಸಭೆ (ಯುಎನ್ ಜಿಎ) ನಡೆಯಲಿದ್ದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನ ವಿದೇಶಾಂಗ ಸಚಿವ ಖಾವಾಜಾ ಮುಖಾಮುಖಿಯಾಗಲಿದ್ದಾರೆ. 
ಮಹಾಸಭೆಯಲ್ಲಿ ಪಾರ್ಶ್ವದಲ್ಲಿ ಇಬ್ಬರೂ ನಾಯಕರು ಶಾಂಘೈ ಸಹಕಾರ ಸಂಘಟನೆ (ಎಸ್ ಸಿಒ) ಭಾಗವಹಿಸಲಿದ್ದಾರೆ. ಇದೇ ವೇಳೆ 15 ದ್ವಿಪಕ್ಷೀಯ ಸಭೆಯಲ್ಲಿ ಸುಷ್ಮಾ ಸ್ವರಾಜ್ ಭಾಗಿಯಾಗಲಿದ್ದಾರೆ. 
ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಮಾಹಿತಿ ನೀಡಿದ್ದು, 7-8 ದಿನಗಳ ಕಾಲ ಕಾರ್ಯಕ್ರಮ ನಿಗದಿಯಾಗಿದ್ದು ಸೆ.18 ರಂದು ಸುಷ್ಮಾ ಸ್ವರಾಜ್ ವಿದೇಶಕ್ಕೆ ತೆರಳಲಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com