ಸರ್ದಾರ್ ಸರೋವರ ಅಣೆಕಟ್ಟೆಯಿಂದ ಯಾರಿಗೆ ಲಾಭ?, ಕಾಂಗ್ರೆಸ್ ಪ್ರಶ್ನೆ

ಸರ್ದಾರ್ ಸರೋವರ ಅಣೆಕಟ್ಟೆ ಉದ್ಘಾಟನೆಗೆ ಮುನ್ನ ಪ್ರಧಾನಿ ಮೋದಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕರು 'ಈ ಯೋಜನೆಯಿಂದ ಯಾರಿಗೆ ಲಾಭವಾಗಲಿದೆ?' ಎಂದು ಪ್ರಶ್ನಿಸಿದ್ದಾರೆ.
ಗೌರವ್ ಗೊಗೊಯ್
ಗೌರವ್ ಗೊಗೊಯ್
ಅಹಮದಾಬಾದ್: ಸರ್ದಾರ್ ಸರೋವರ ಅಣೆಕಟ್ಟೆ ಉದ್ಘಾಟನೆಗೆ ಮುನ್ನ ಪ್ರಧಾನಿ ಮೋದಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕರು 'ಈ ಯೋಜನೆಯಿಂದ ಯಾರಿಗೆ ಲಾಭವಾಗಲಿದೆ?' ಎಂದು ಪ್ರಶ್ನಿಸಿದ್ದಾರೆ.
ಎಎನ್ ಐ ಜತೆಗೆ ಮಾತನಾಡಿದ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್, "ಈ ಅಣೆಕಟ್ಟಿನಿಂದ ಯಾರು ಪ್ರಯೋಜನ ಪಡೆಯುತ್ತಾರೆ ಎಂದು ನಾನು ಕೇಳಬಯಸುತ್ತೇನೆ. ಇದರಿಂದ ನೀರಾವರಿ ಸೌಲಭ್ಯ ಪಡೆಯದ ಸಣ್ಣ ರೈತರಿಗೆ ಪ್ರಯೋಜನವಾಗಲಿದೆ, ಅದರ ಅಣೆಕಟ್ಟೆ ನಿರ್ಮಾಣದ ಕಾರಣದಿಂದಾಗಿ ಮನೆಗಳನ್ನು ತೆಗೆದುಕೊಂಡ ಗ್ರಾಮಸ್ಥರಿಗೆ ಅದು ಪ್ರಯೋಜನವಾಗುವುದೇ? ಅವರಿಗೆ ಸರಿಯಾದ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಲಾಗಿದೆಯೆ? ಅಪನಗದಿಕರಣದ ಕಾರಣದಿಂದ ಮುಚ್ಚುತ್ತಿರುವ ಸಣ್ಣ ಕೈಗಾರಿಕೆಗಳು ಈ ಅಣೆಕಟ್ಟೆಯಿಂದ ವಿದ್ಯುತ್ ಪ್ರಯೋಜನವನ್ನು ಪಡೆಯಲಿವೆಯೆ, ಅಥವಾ, ಆಡಳಿತ ಪಕ್ಷಕ್ಕೆ ಆಪ್ತವಾಗಿರುವ ದೊಡ್ಡ ಕೈಗಾರಿಕೆ ಸಂಸ್ಥೆಗಳು ಮಾತ್ರ ಇದರ ಲಾಭ ಹೊಂದುತ್ತವೆಯೆ? ಇದಕ್ಕೆಲ್ಲಾ ಕಾಲವೇ ಉತ್ತರಿಸಲಿದೆ."
"ಭಾರತೀಯ ಜನತಾ ಪಕ್ಷದ (ಬಿಜೆಪಿ) ತಮ್ಮ ಆಪ್ತರಾದ ದೊಡ್ಡ ಉದ್ಯಮಿಗಳನ್ನಷ್ಟೇ ದೃಷ್ಟಿಯಲ್ಲಿರಿಸಿಕೊಂಡಿದೆ. ಇದು ದುರದೃಷ್ಟಕರ" ಎಂದು ಗೌರವ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com