ಪ್ರಧಾನಿ ಮೋದಿ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ

ಇತ್ತೀಚೆಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅವಹೇಳನಕಾರಿ ಶಬ್ದಗಳಲ್ಲಿ ಟ್ವಿಟ್ಟರ್ ನಲ್ಲಿ ಟೀಕಿಸಿ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಅವರು ಸುದ್ದಿಯಾಗಿದ್ದರು. ಆ ಸಾಲಿಗೀಗ ಮತ್ತೊಬ್ಬ ಕಾಂಗ್ರೆಸ್ ಮುಖಂಡ...
ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ
ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ
ನವದೆಹಲಿ: ಇತ್ತೀಚೆಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅವಹೇಳನಕಾರಿ ಶಬ್ದಗಳಲ್ಲಿ ಟ್ವಿಟ್ಟರ್ ನಲ್ಲಿ ಟೀಕಿಸಿ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಅವರು ಸುದ್ದಿಯಾಗಿದ್ದರು. ಆ ಸಾಲಿಗೀಗ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಸೇರ್ಪಡೆಗೊಂಡಿದ್ದಾರೆ. 
ಪ್ರಧಾನಮಂತ್ರಿ ನರೇದಂರ್ ಮೋದಿಯವರನ್ನು ಗುರಿ ಮಾಡಿಕೊಂಡು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿಯವರು ಅಶ್ಲೀಲ ಪದಗಳನ್ನು ಟ್ವೀಟ್ ಮಾಡಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ರೋಮನ್ ಭಾಷೆಯಲ್ಲಿ ಹಿಂದಿ ಪದಗಳನ್ನು ಬರೆದು ಟ್ವೀಟ್ ಮಾಡಿರುವ ತಿವಾರಿಯವರು ಭಕ್ತರನ್ನು (ಅನುಯಾಯಿಗಳನ್ನು) ಚೂ...ಗಳನ್ನಾಗಿ (ಮೂರ್ಖರನ್ನಾಗಿ) ಮತ್ತು ಮೂರ್ಖರನ್ನು ಭಕ್ತರನ್ನಾಗಿ... ಮಾಡುವುದು ಎಂದರೆ ಇದೇ... ಗಾಂಧೀಜಿ ಕೂಡ ಮೋದಿಗೆ ದೇಶಭಕ್ತಿ ಕಲಿಸಲಾಗದು. ಮೋದಿಯವರ ಡಿಎನ್ಎಯಲ್ಲೇ ದೇಶಭಕ್ತಿ ತುಂಬಿದೆ. ಗಾಂಧೀಜಿಯವರೂ ಕೂಡ ಮೋದಿಯವರಿಗೆ ದೇಶಭಕ್ತಿಯನ್ನು ಬೋಧಿಸಲು ಸಾಧ್ಯವಿಲ್ಲ ಎಂದು ಮನೀಶ್ ಅವರು ಹೇಳಿಕೊಂಡಿದ್ದಾರೆ. 
ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ದಿನದಂದೇ ಮೋದಿ ಕುರಿತು ತಿವಾರಿಯವರು ಟ್ವೀಟ್ ಮಾಡಿರುವುದು, ಇದೀಗ ಭಾರೀ ವಿರೋಧಗಳು, ಖಂಡನೆಗಳಿಗೆ ಕಾರಣವಾಗಿದೆ. 
ಇನ್ನು ತಿವಾರಿಯವರ ವಿರುದ್ಧ ಟ್ವಿಟರ್ ನಲ್ಲಿ ಹ್ಯಾಷ್ ಟ್ಯಾಗ್ ಕೂಡ ಆರಂಭಗೊಂಡಿದ್ದು, #CongLeaderAbusePM’ ಎಂಬ ಹ್ಯಾಷ್ ಟ್ಯಾಗ್ ಬಳಿ ತಿವಾರಿಯನ್ನು ಟ್ರೋಲ್ ಮಾಡಲಾಗುತ್ತಿದೆ.
ಮೋದಿಯವರ ವಿರುದ್ಧ ಅಶ್ಲೀಲ ಪದಗಳನ್ನು ಬಳಕೆ ಮಾಡಿದ್ದಕ್ಕೆ ಭಾರೀ ವಿರೋಧಗಳು ವ್ಯಕ್ತವಾದ ಬಳಿಕ ಮತ್ತೊಮ್ಮೆ ಟ್ವೀಟ್ ಮಾಡಿರುವ ತಿವಾರಿಯವರು, 'ಆಡುಮಾತಿನ' ಹಿಂದಿ ನುಡಿಗಟ್ಟು ಪದಗಳನ್ನು ಬಳಕೆ ಮಾಡಿದ್ದಕ್ಕೆ ಕ್ಷಮೆಯಾಚಿಸಲು ನಾನು ಸಿದ್ಧನಿದ್ದೇನೆ. ಆದರೆ ಪ್ರಧಾನಿ ಮೋದಿಯವರು ಮಹಿಳೆಯರನ್ನು ನಿಂದಿಸಿದ್ದ ವ್ಯಕ್ತಿಗಳನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡುವುದನ್ನು ನಿಲ್ಲಿಸುತ್ತೇನೆಂದು ಭರವಸೆ ನೀಡಿದರೆ ಮಾತ್ರ ಎಂದು ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com