ಚೆನ್ನೈ: ಚೆನ್ನೈ ಕೇಂದ್ರ ಹಾಗೂ ದೇಶದ ಇತರ 6 ಸ್ಟೇಷನ್ ಗಳಲ್ಲಿ ರಿಸರ್ವೇಷನ್ ಚಾರ್ಟ್ ಹಾಕುವ ಪದ್ಧತಿ ಶೀಘ್ರವೇ ಅಂತ್ಯವಾಗಲಿದೆ.
ರಿಸರ್ವೇಷನ್ ಚಾರ್ಟ್ ಹಾಕುವ ಪದ್ಧತಿಯನ್ನು ನಿಲ್ಲಿಸಲು ರೈಲ್ವೆ ಮಂಡಳಿ ನಿರ್ಧರಿಸಿದ್ದು, ನವದೆಹಲಿ, ನಿಜಾಮುದ್ದೀನ್, ಮುಂಬೈ ಛತ್ರಪತಿ ಶಿವಾಜಿ ಟರ್ಮಿನಸ್, ಹೌರಾ, ಸೆಲ್ದಾ, ಚೆನ್ನೈ ಸೆಂಟ್ರಲ್ ನ ನಿಲ್ದಾಣಗಳಲ್ಲಿ ರಿಸರ್ವೇಷನ್ ಚಾರ್ಟ್ ಹಾಕುವುದನ್ನು ನಿಲ್ಲಿಸಲಾಗುತ್ತದೆ.
ಈ ಕುರಿತು ನವದೆಹಲಿ ಕಚೇರಿಯಿಂದ ಎಲ್ಲಾ ರೈಲ್ವೆ ಝೋನ್ ಗಳಿಗೂ ಸುತ್ತೋಲೆ ಹೊರಡಿಸಲಾಗಿದೆ. " ಹೊಸ ಪ್ರಸ್ತಾವನೆಗೆ ಹೆಚ್ಚಿನ ಪ್ರಚಾರ ನೀಡಿ ಶೀಘ್ರವೇ ಜಾರಿಗೊಳಿಸಲಾಗುತ್ತದೆ ಎಂದು ದಕ್ಷಿಣ ರೈಲ್ವೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಹಾಗೂ ಯಶವಂತಪುರದಿಂದ ಹೊರಡುವ ರೈಲುಗಳಲ್ಲಿ ರಿಸರ್ವೇಷನ್ ಚಾರ್ಟ್ ಗಳನ್ನು ಹಾಕುವ ಪದ್ಧತಿಯನ್ನು ಕಳೆದ ವರ್ಷ ಸೌತ್ ವೆಸ್ಟ್ರನ್ ರೈಲ್ವೆ ಕೈಬಿಟ್ಟಿತ್ತು. ಇದಾದ ಬಳಿಕ ರೈಲ್ವೆ ಮಂಡಳಿ ಎಲ್ಲಾ 6 ಪ್ರಮುಖ ಸ್ಟೇಷನ್ ಗಳಲ್ಲಿಯೂ ರಿಸರ್ವೇಷನ್ ಚಾರ್ಟ್ ಹಾಕುವ ಪದ್ಧತಿಯನ್ನು ಕೈಬಿಡಲು ನಿರ್ಧರಿಸಿದೆ.