ದೆಹಲಿ ಪಬ್ಲಿಕ್ ಶಾಲೆ ಮಧ್ಯಂತರ ಪರೀಕ್ಷೆಯಲ್ಲಿ ಬ್ಲೂವೇಲ್ ಗೇಮ್ ಕುರಿತು ಪ್ರಶ್ನೆ!

ದೇಶಾದ್ಯಂತ ಬ್ಲೂವೇಲ್ ಆನ್ ಲೈನ್ ಗೇಮ್ ಭೂತದ ವಿರುದ್ಧ ಜಾಗೃತಿ ಅಭಿಯಾನಗಳು ನಡೆಯುತ್ತಿದ್ದರೆ ದೆಹಲಿಯ ಶಾಲೆಯೊಂದು ಮಧ್ಯಂತರ ಪರೀಕ್ಷೆಯಲ್ಲಿ ಬ್ಲೂವೇಲ್ ಕುರಿತ ಪ್ರಶ್ನೆ ಕೇಳುವ ಮೂಲಕ ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶಾದ್ಯಂತ ಬ್ಲೂವೇಲ್ ಆನ್ ಲೈನ್ ಗೇಮ್ ಭೂತದ ವಿರುದ್ಧ ಜಾಗೃತಿ ಅಭಿಯಾನಗಳು ನಡೆಯುತ್ತಿದ್ದರೆ ದೆಹಲಿಯ ಶಾಲೆಯೊಂದು ಮಧ್ಯಂತರ ಪರೀಕ್ಷೆಯಲ್ಲಿ ಬ್ಲೂವೇಲ್ ಕುರಿತ ಪ್ರಶ್ನೆ ಕೇಳುವ ಮೂಲಕ ಪೋಷಕರ  ಕೆಂಗಣ್ಣಿಗೆ ಗುರಿಯಾಗಿದೆ.
ದೆಹಲಿ ಕೊರ್ಬಾನಗರದ ಡೆಲ್ಲಿ ಪಬ್ಲಿಕ್ ಸ್ಕೂಲ್ ಇಂತಹುದೊಂದು ಯಡವಟ್ಟು ಮಾಡಿಕೊಂಡಿದ್ದು, ತನ್ನ ಶಾಲೆಯ 9ನವೇ ತರಗತಿ ವಿದ್ಯಾರ್ಥಿಗಳ ಮಧ್ಯಂತರ ಪರೀಕ್ಷೆಯಲ್ಲಿ ಬ್ಲೂವೇಲ್ ಗೇಮ್ ಕುರಿತು ಪ್ರಶ್ನೆಯೊಂದನ್ನು ಕೇಳಿದೆ.  9ನೇ ತರಗತಿಯ ಹಿಂದಿ ಪ್ರಶ್ನೆ ಪತ್ರಿಕೆಯಲ್ಲಿ ಈ ಪ್ರಶ್ನೆ ಕೇಳಲಾಗಿದ್ದು, ಪ್ರಶ್ನೆ ಪತ್ರಿಕೆಯಲ್ಲಿ ಇಬ್ಬರು ಸ್ನೇಹಿತರು ಬ್ಲೂವೇಲ್ ಗೇಮ್ ಬಗ್ಗೆ ಹೇಗೆ ಮಾತನಾಡಬಹುದು ಎಂಬುದನ್ನು 50 ಪದಗಳಲ್ಲಿ ಉತ್ತರಿಸಿ ಎಂದು ವಿದ್ಯಾರ್ಥಿಗಳಿಗೆ  ಕೇಳಲಾಗಿದೆ.

ಇನ್ನು ಶಾಲೆಯ ಕ್ರಮದ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಕಿಡಿಕಾರಿದ್ದು, ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಡಿ ಕೌಶಿಕ್ ಅವರಿಗೆ ದೂರು ಕೂಡ ನೀಡಿದ್ದಾರೆ. ದೂರಿನ ಅನ್ವಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕೌಶಿಕ್ ಅವರು,  ಇಂತಹ ಪ್ರಶ್ನೆ ಕೇಳುವ ಮೂಲಕ ಶಾಲೆ ಬಹಿರಂಗವಾಗಿಯೇ ಸುರಕ್ಷತಾ ಮಾನದಂಡವನ್ನು ಮೀರಿದೆ. ಈ ಬಗ್ಗೆ ತನಿಖೆ ನಡೆಸಿ ನಾವು ಯಾವ ಮಾನದಂಡದ ಮೇಲೆ ಶಾಲೆ ವಿದ್ಯಾರ್ಥಿಗಳಲ್ಲಿ ಇಂತಹ ಪ್ರಶ್ನೆ ಕೇಳಿತು ಎಂಬುದನ್ನು  ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ.

ಮಕ್ಕಳನ್ನು ದುಷ್ಟಟಗಳಿಂದ ದೂರವಿರಿಸಲು ಶಾಲೆಗಳು ಕ್ರಮ ಕೈಗೊಳ್ಳಬೇಕು. ಆದರೆ ಶಾಲೆಗಳೇ ಈ ರೀತಿ ವರ್ತಿಸುವುದು ಸರಿಯಲ್ಲ. ಮಕ್ಕಳ ಸುರಕ್ಷತೆ ವಿಚಾರದಲ್ಲಿ ಶಾಲೆಗಳ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕೌಶಿಕ್  ಹೇಳಿದ್ದಾರೆ. ಇನ್ನು ಪ್ರಶ್ನೆ ಪತ್ರಿಕೆ ವಿವಾದ ಸಂಬಂಧ ಈ ವರೆಗೂ ಶಾಲಾ ಆಡಳಿತ ಮಂಡಳಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com