ಬಿಹಾರದಲ್ಲಿ ಉದ್ಘಾಟನೆಗೊಳ್ಳಬೇಕಿದ್ದ ಅಣೆಕಟ್ಟು ಕುಸಿತ

ಬಿಹಾರದಲ್ಲಿ ಇನ್ನಷ್ಟೇ ಉದ್ಘಾಟನೆ ಗೊಳ್ಳಬೇಕಿದ್ದ 389.31 ಕೋಟಿ ಮೌಲ್ಯದ ಘಟೇಶ್ವರ ಪಂತ್ ನಾಲಾ ಯೋಜನೆ ಅಣೆಕಟ್ಟೆಯ ಒಂದು ಭಾಗ ಕುಸಿದಿದೆ
ಘಟೇಶ್ವರ ಪಂತ್ ನಾಲಾ ಯೋಜನೆ
ಘಟೇಶ್ವರ ಪಂತ್ ನಾಲಾ ಯೋಜನೆ
ಭಾಗಲ್ಪುರ್: ಬಿಹಾರದಲ್ಲಿ ಇನ್ನಷ್ಟೇ ಉದ್ಘಾಟನೆ ಗೊಳ್ಳಬೇಕಿದ್ದ 389.31 ಕೋಟಿ ಮೌಲ್ಯದ ಘಟೇಶ್ವರ ಪಂತ್ ನಾಲಾ ಯೋಜನೆ ಅಣೆಕಟ್ಟೆಯ ಒಂದು ಭಾಗ ಕುಸಿದಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇನ್ನೇನು 24 ಗಂಟೆಗಳಲ್ಲಿ ಲೋಕಾರ್ಪಣೆ ಗೊಳಿಸಬೇಕಿದ್ದ ಈ ಅಣೆಕಟ್ಟೆ ಕುಸಿದಿರುವುದು ಆಘಾತಕಾರಿ ಘಟನೆ ಆಗಿದೆ.
ಬಿಹಾರ ಜಲ ಸಂಪನ್ಮೂಲ ಸಚಿವ ಲಲ್ಲನ್ ಸಿಂಗ್ ಘಟನೆ ಕುರಿತಂತೆ ವಿವರಿಸುತ್ತಾ "ನೀರು ಅತಿ ಹೆಚ್ಚು ಪ್ರಮಾಣದಲ್ಲಿ ಹರಿದು ಬಂದ ಕಾರಣ ಅಣೆಕಟ್ಟೆಯ ಭಾಗ ಕುಸಿದಿದೆ. ಆದರೆ ಇದರಿಂದ ಹೊಸದಾಗಿ ನಿರ್ಮಾಣವಾದ ಅಣೆಕಟ್ಟೆಯ ಭಾಗಕ್ಕೆ ಯಾವ ಹಾನಿ ಆಗಿಲ್ಲ" ಎಂದರು.
ಅಣೆಕಟ್ಟೆಯ ಭಾಗ ಕುಸಿದಿರುವ ಕಾರಣ ಈ ಅಣೆಕಟ್ತೆ ಉದ್ಘಾಟನಾ ಸಮಾರಂಭವನ್ನು ರದ್ದು ಪಡಿಸಲಾಗಿದೆ
ಭಾಗಲ್ಪುರದ ಕಹಲ್ಲಾಂವ್ ನಲ್ಲಿನ ನೀರಾವರಿ ಯೋಜನೆ ಅಡಿಯಲ್ಲಿ ಸರಕಾರವು ಬತೇಶ್ವರ ಸ್ಥಾನ್ ಗಂಗಾ ಕಾಲುವೆ ಯೋಜನೆಯನ್ನು ನಿರ್ಮಿಸಿದೆ ಎಂದು ಹೇಳಲಾಗಿದ್ದು  ಈ ಯೋಜನೆಗೆ 389.31 ಕೋಟಿ ರೂ.ವೆಚ್ಚವಾಗಿದೆ.
ಘಟೇಶ್ವರ ಪಂತ್ ಕಾಲುವೆ ಯೋಜನೆ ಬಹಳ ಹಳೆಯ ಯೋಜನೆ ಆಗಿದೆ. ಈ ಯೋಜನೆ ಪೂರ್ಣಗೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿದೆ.
ಕಾಲುವೆಯಲ್ಲಿ ನೀರು ಸಂಗ್ರಹಿಸುವುದು ಈ ಅಣೆಕಟ್ಟು ನಿರ್ಮಿಸುವ ಮುಖ್ಯ ಉದ್ದೇಶವಾಗಿದ್ದು ಇದರಿಂದ ರೈತರು ಯಾವುದೇ ಸಮಸ್ಯೆ ಇಲ್ಲದೆ ಕೃಷಿಗಾಗಿ ನೀರನ್ನು ಬಳಸಿಕೊಳ್ಳಬಹುದಾಗಿದೆ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com