ಭಾರತದ ವಿರುದ್ಧ ಆರೋಪ ಮಾಡುವ ಭರದಲ್ಲಿ ಪಾಕ್ ಎಡವಟ್ಟು: ಕಾಶ್ಮೀರಿಗಳ ಮೇಲಿನ ದೌರ್ಜನ್ಯದ ಸಾಕ್ಷಿಗೆ ಪ್ಯಾಲೆಸ್ಟೇನ್ ನ ಫೋಟೊ!

ವಿಶ್ವಸಂಸ್ಥೆಯಲ್ಲಿ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಅವರ ಭಾಷಣಕ್ಕೆ ಪಾಕಿಸ್ತಾನದ ರಾಯಭಾರಿ ಪ್ರತಿಕ್ರಿಯೆ ನೀಡಿದ್ದು, ಭಾರತದ ವಿರುದ್ಧ ಆರೋಪ ಮಾಡುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.
ಭಾರತದ ವಿರುದ್ಧ ಆರೋಪ ಮಾಡುವ ಭರದಲ್ಲಿ ಪಾಕ್ ಎಡವಟ್ಟು: ಕಾಶ್ಮೀರಿಗಳ ಮೇಲಿನ ದೌರ್ಜನ್ಯದ ಸಾಕ್ಷಿಗೆ ಪ್ಯಾಲೆಸ್ಟೇನ್ ನ ಫೋಟೊ!
ನ್ಯೂಯಾರ್ಕ್: ವಿಶ್ವಸಂಸ್ಥೆಯಲ್ಲಿ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಅವರ ಭಾಷಣಕ್ಕೆ ಪಾಕಿಸ್ತಾನದ ರಾಯಭಾರಿ ಪ್ರತಿಕ್ರಿಯೆ ನೀಡಿದ್ದು, ಭಾರತದ ವಿರುದ್ಧ ಆರೋಪ ಮಾಡುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. 
ಕಾಶ್ಮೀರಿಗಳ ಮೇಲೆ ದೌರ್ಜನ್ಯ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿ ಪ್ಯಾಲೆಸ್ಟೇನ್ ನಲ್ಲಿ ದಾಳಿಗೊಳಗಾದವರ ಫೋಟೊ ತೋರಿಸಿ ಪಾಕಿಸ್ತಾನ ಎಡವಟ್ಟು ಮಾಡಿಕೊಂಡಿದೆ. ಭಾರತ ಕಾಶ್ಮೀರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಲಗಾಯ್ತಿನಿಂದ ಆರೋಪಿಸುತ್ತಿರುವ ಪಾಕಿಸ್ತಾನ ಪ್ಯಾಲೆಸ್ಟೇನ್ ನಲ್ಲಿ ದಾಳಿಗೊಳಗಾದ ಯುವತಿಯ ಫೋಟೋವನ್ನು ವಿಶ್ವಸಂಸ್ಥೆಯಲ್ಲಿ ತೋರಿಸಿ "ಇದು ಭಾರತದ ಪ್ರಜಾಪ್ರಭುತ್ವದ ಮುಖ" ಎಂದು ಹೇಳಿದೆ. 
ಪಾಕಿಸ್ತಾನದ ರಾಯಭಾರಿ ಮಲೀಹಾ ಲೋಧಿ ಅವರು ತೋರಿಸಿದ ಫೋಟೊವನ್ನು ಪರಿಶೀಲಿಸಿದಾಗ ಅದು 2014 ರಲ್ಲಿ ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಗಾಯಗೊಂಡ ಪ್ಯಾಲೆಸ್ಟೇನ್ ನ 17 ವರ್ಷದ ಬಾಲಕಿಯ ಫೋಟೊ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com