ನರೇಂದ್ರ ಮೋದಿ
ನರೇಂದ್ರ ಮೋದಿ

ಎಲ್ಲರಿಗೂ ವಿದ್ಯುತ್ ನೀಡುವ 'ಸೌಭಾಗ್ಯ' ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದೂಳಿದವರಿಗೆ ಉಚಿತ ವಿದ್ಯುತ್ ನೀಡುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು....
ನವದೆಹಲಿ: ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದೂಳಿದ ಬಡವರಿಗೆ ಉಚಿತ ವಿದ್ಯುತ್ ನೀಡುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ 'ಸೌಭಾಗ್ಯ'ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಚಾಲನೆ ನೀಡಿದ್ದಾರೆ.
ಬಿಪಿಎಲ್ ಕುಟುಂಬಕ್ಕಾಗಿ ಉಚಿತ ವಿದ್ಯುತ್ ಯೋಜನೆ ಸೌಭಾಗ್ಯದ ಜೊತೆಗೆ ಇತರೆ ಗ್ರಾಹಕರಿಗಾಗಿ 500 ರುಪಾಯಿಗೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವ ಯೋಜನೆಗೂ ಪ್ರಧಾನಿ ಚಾಲನೆ ನೀಡಿದ್ದಾರೆ.
ನೋಟ್ ನಿಷೇಧ ಹಾಗೂ ಜಿಎಸ್ ಟಿ ಜಾರಿ ನಂತರ ಪ್ರಧಾನಿ ಮೋದಿ ಅವರು ಇಂದು ಮತ್ತೊಂದು ಪ್ರಮುಖ ಚುನಾವಣಾ ಭರವಸೆಯನ್ನು ಈಡೇರಿಸಿದ್ದಾರೆ.
ಸೌಭಾಗ್ಯ ಯೋಜನೆಯಡಿ ಮಾರ್ಚ್ 29, 2019ರೊಳಗೆ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಕೇಂದ್ರ ಸರ್ಕಾರ ಗಡುವು ನಿಗದಿ ಮಾಡಿದೆ.
ಇದುವರೆಗೂ ಬೆಳಕು ಕಾಣದ 18 ಸಾವಿರ ಗ್ರಾಮಗಳು ಹಾಗೂ 3 ಕೋಟಿ ಗ್ರಾಮೀಣ ಪ್ರದೇಶದ ಮನೆಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ.
16, 320 ಕೋಟಿ ರುಪಾಯಿ ಮೌಲ್ಯದ ಯೋಜನೆ ಇದಾಗಿದ್ದು, ದಿನದ 24 ಗಂಟೆಯೂ ಮನೆಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com