ಸೇನಾ ವಾಹನಕ್ಕೆ ಕಟ್ಟಿ ಹಾಕಿ ಸುಮಾರು 5 ಗಂಟೆಕೂ ಹೆಚ್ಚು ಕಾಲ ಸುತ್ತಾಡಿಸಲ್ಪಟ್ಟಿದ್ದ ಫಾರೂಖ್ ಅಹ್ಮದ್ ಏಪ್ರಿಲ್.9 ರಂದು ಮತ ಚಲಾಯಿಸಲು ಹೋಗಿದ್ದ ಎಂದು ಪೊಲೀಸರು ತನಿಖಾ ವರದಿಯಲ್ಲಿ ತಿಳಿಸಿದ್ದಾರೆ.
ಸಂತ್ರಸ್ತ ಫಾರೂಕ್ ಕಸೂತಿ ಕೆಲಸಗಾರನನಾಗಿದ್ದು, ಏಪ್ರಿಲ್.9 ರಂದು ತನ್ನ ಹುಟ್ಟೂರಾದ ಚಿಲ್'ಲ್ ಎಂಬಲ್ಲಿನ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಿದ್ದ. ಮತ ಚಲಾಯಿಸಿದ ಬಳಿಕ ಆತ ಸಂಬಂಧಿಕ ಹಿಲಾಲ್ ಅಹ್ಮದ್ ಮಗ್ರೆ ಎಂಬಾತನ ಜೊತೆಗೆ ಗಂಪೋರಾದಲ್ಲಿ ನಡೆಯಲಿದ್ದ ಸಂತಾಪ ಸಭೆಗೆ ಹೊರಟಿದ್ದ. ಈ ವೇಳೆ ಸೇನಾಧಿಕಾರಿಗಳು ಫಾರೂಖ್ ನನ್ನು ಹಿಡಿದು ಸೇನಾ ಜೀಪಿಗೆ ಕಟ್ಟಿ ಹಾಕಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಪ್ರಕರಣದ ತನಿಖೆ ಮುಂದುವರೆದಿದ್ದು, ಜಿಲ್ಲಾ ಚುನಾವಣಾ ಕಚೇರಿ ಬುದ್ಗಾಮ್/ಕಾಯ್ ಕಮಾಂಡರ್ 53 ಆರ್'ಆರ್ ಕ್ಯಾಂಪ್ ಬೀರ್ ವಾಹ್ ಇವರಿಂದ ವರದಿಗಳನ್ನು ಪಡೆದುಕೊಂಡು, ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಿ ಪ್ರಕರಣದ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಂತ್ರಸ್ತ ಫಾರೂಕ್ ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ನಾಯಕನಾಗಿದ್ದ ಹಾಗೂ ಗುಂಪೊಂದರ ನೇತೃತ್ವ ವಹಿಸಿದ್ದ ಎಂದು ಈ ಹಿಂದೆ ಸೇನಾ ವಾಹನಕ್ಕೆ ಆತನನ್ನು ಕಟ್ಟಿ ಹಾಕಲು ಆದೇಶಿಸಿದ್ದ ಸೇನಾಧಿಕಾರಿ ಮೇಜಲ್ ಲೀತುಲ್ ಗೊಗೊಯ್ ಅವರು ವಾದಿಸಿದ್ದರು.
ಪ್ರಕರಣ ಸಂಬಂಧ ಖಾಸಗಿ ಮಾಧ್ಯಮವೊಂದರ ಜೊತೆಗೆ ಮಾತನಾಡಿದ್ದ ಫಾರೂಕ್ ತನ್ನ ಅಳಲನ್ನು ತೋಡಿಕೊಂಡಿದ್ದ. ಶ್ರೀನಗರ ಲೋಕಸಭಾ ಉಪಚುನಾವಣೆಗಾಗಿ ಮತ ಚಲಾಯಿಸಲು ಅರಿಝಲ್'ನ ಚಿಲ್'ಲ್ ಬ್ರಾಸ್ ಪ್ರದೇಶದಲ್ಲಿ ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಂತಿದ್ದೆ. ಈ ಮೂಲಕ ಚುನಾವಣೆ ಬಹಿಷ್ಕರಿಸುವಂತೆ ಕರೆ ನೀಡಿದ್ದ ಪ್ರತ್ಯೇಕತಾವಾದಿಗಳಿಗೆ ಸವಾಲೊಡ್ಡಿದ್ದೆ. ನಾನು ಪ್ರಜಾಪ್ರಭುತ್ವಕ್ಕಾಗಿ ಮತ ಚಲಾಯಿಸಿದವನಾಗಿರುವಾಗ ಇತರರು ಮತ ಚಲಾಯಿಸುವುದನ್ನು ತಡೆದು ನಾನೇಕೆ ಕಲ್ಲು ತೂರಾಟ ನಡೆಸಲಿ? ಎಂದು ಪ್ರಶ್ನಿಸಿದ್ದ.
ಪ್ರತ್ಯೇಕತಾವಾದಿಗಳು ಹಾಗೂ ಉಗ್ರರಿಗೆ ಸೆಡ್ಡು ಹೊಡೆದು ಮತ ಚಲಾಯಿಸಿದ್ದಕ್ಕೆ ನನ್ನನ್ನು ಮಾನವ ಗುರಾಣಿಯಾಗಿ ಮಾಡಿಬಿಟ್ಟರು. ಮುಂದೆಂದೂ ನಾನು ಮತ ಚಲಾಯಿಸುವುದಿಲ್ಲ ಎಂದು ಹೇಳಿದ್ದ.
ಕಳೆದ ಏಪ್ರಿಲ್ 9ರಂದು ಕಾಶ್ಮೀರದಲ್ಲಿ ಭುಗಿಲೆದ್ದಿದ್ದ ವ್ಯಾಪಕ ಹಿಂಸಾಚಾರ ಮತ್ತು ಕಲ್ಲು ತೂರಾಟ ನಿಗ್ರಹಕ್ಕಾಗಿ ಸೇನಾ ಯೋಧ ಮೇಜರ್ ನಿತಿನ್ ಗಗೋಯ್ ಅವರು, ಕಲ್ಲು ತೂರಾಟಗಾರರ ನಾಯಕ ರೂಕ್ ಅಹ್ಮದ್ ದಾರ್ ನನ್ನು ಸೇನಾವಾಹನಕ್ಕೆ ಕಟ್ಟಿ ಮಾನವ ಗುರಾಣಿಯಾಗಿ ಬಳಕೆ ಮಾಡಿದ್ದರು. ಈ ವಿಚಾರ ದೇಶಾದ್ಯಂತ ವ್ಯಾಪಕ ವೈರಲ್ ಆಗಿತ್ತು.