ಡಾರ್ಜಿಲಿಂಗ್ ಹಿಂಸಾಚಾರ ಕುರಿತಂತೆ ನಿನ್ನಯಷ್ಟೇ ಹೇಳಿಕೆ ನೀಡಿದ್ದ ರಾಜನಾಥ ಸಿಂಗ್ ಅವರು, ಪ್ರಜಾಪ್ರಭುತ್ವದಲ್ಲಿ ಮಾತುಕತೆ ಮೂಲಕವಷ್ಟೇ ಯಾವುದೇ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದಾಗಿದೆ. ಸಂಯಮ, ಕಾನೂನಿನ ಚೌಕಟ್ಟಿನೊಳಗಿನ ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಡಾರ್ಜಿಲಿಂಗ್ ನಲ್ಲಿ ಇಂದು ನಡೆಯುತ್ತಿರುವ ಹಿಂಸಾಚಾರಗಳನ್ನು ಕಂಡು ಸಾಕಷ್ಟು ನೋವಾಗಿದೆ. ಡಾರ್ಜಿಲಿಂಗ್ ನಲ್ಲಿ ಮತ್ತೆ ಶಾಂತಿಯುತ ವಾತಾವರಣ ಮರುಕಳಿಸಲು ಪ್ರತಿಭಟನೆ ಹಾಗೂ ಬಂದ್ ಗಳನ್ನು ಹಿಂದಕ್ಕೆ ಪಡೆಯುವಂತೆ ಈ ಮೂಲಕ ಜಿಜೆಎಂ ಮತ್ತು ಅದರ ನಾಯಕ ಬಿಮಾರ್ ಗುರುಂಗ್ ಅವರಿಗೆ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆಂದು ತಿಳಿಸಿದ್ದರು.