ಕಾಂಗ್ರೆಸ್ ನ ಉತ್ಸಾಹ ಕುಗ್ಗಿಸಲು ಸರ್ಕಾರ ಯತ್ನಿಸುತ್ತಿದೆ: ಬೊಫೋರ್ಸ್ ತನಿಖೆ ಕುರಿತು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

ತಮ್ಮ ಪಕ್ಷಕ್ಕೆ ಅವಮಾನವುಂಟು ಮಾಡಲು ಮತ್ತು ಉತ್ಸಾಹ ಕುಗ್ಗಿಸಲು ಕೇಂದ್ರ ಸರ್ಕಾರ ಬೋಫೋರ್ಸ್ ವಿಷಯ ಮತ್ತೆ .....
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ತಮ್ಮ ಪಕ್ಷಕ್ಕೆ ಅವಮಾನವುಂಟು ಮಾಡಲು ಮತ್ತು  ಉತ್ಸಾಹ ಕುಗ್ಗಿಸಲು ಕೇಂದ್ರ ಸರ್ಕಾರ ಬೋಫೋರ್ಸ್ ವಿಷಯ ಮತ್ತೆ ತಂದಿದೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಹಲವು ವರ್ಷಗಳ ನಂತರ ಮತ್ತೆ ಸರ್ಕಾರ ಬೋಫೋರ್ಸ್ ವಿಷಯವನ್ನು ತಂದಿದೆ. ಇದು ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಗೆ ಕೆಟ್ಟ ಹೆಸರು ತರಲು ಹೀಗೆ ಮಾಡಲಾಗುತ್ತಿದೆ ಎಂದರು.
2005ರಲ್ಲಿ ಹೈಕೋರ್ಟ್ ಕೇಸನ್ನು ವಜಾಗೊಳಿಸಿದ ನಂತರ ಅದನ್ನು ಮತ್ತೆ ತರುವ ಅಗತ್ಯವಿಲ್ಲ. ಮತ್ತೆ ಮನವಿ ಸಲ್ಲಿಸಿ ಕಾನೂನು ಹೋರಾಟ ನಡೆಸುವ ಅಗತ್ಯವಿಲ್ಲ ಎಂದು ಕಾನೂನು ಇಲಾಖೆಯ ಸಲಹಾ ಸಮಿತಿ ಕೂಡ ಸಲಹೆ ನೀಡಿದೆ ಎಂದು ಖರ್ಗೆ ಹೇಳಿದರು.
1090ರಲ್ಲಿ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ಬೋಫೋರ್ಸ್ ಹಗರಣ ಸದ್ದು ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com