ಡೇರಾ ಸಚ್ಚಾ ಸೌದಾ ಆಸ್ತಿ ಬಗ್ಗೆ ತನಿಖೆ ನಡೆಸಿ: ಐಟಿ, ಇಡಿಗೆ ಹೈಕೋರ್ಟ್ ಆದೇಶ

ಡೇರಾ ಸಚ್ಚಾ ಸೌದಾ ವಿರುದ್ಧದ ಅಕ್ರಮ ಹಣ ವಹಿವಾಟು ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಎಂದು ಪಂಜಾಬ್ ..
ಡೇರಾ ಸಚ್ಚಾ ಸೌದ ಆಶ್ರಮ
ಡೇರಾ ಸಚ್ಚಾ ಸೌದ ಆಶ್ರಮ
ರೋಹ್ಟಕ್: ಡೇರಾ ಸಚ್ಚಾ ಸೌದಾ ವಿರುದ್ಧದ ಅಕ್ರಮ ಹಣ ವಹಿವಾಟು ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಬುಧವಾರ ಜಾರಿ ನಿರ್ದೇಶನಾಲಯ(ಇಡಿ) ಹಾಗೂ ಆದಾಯ ತೆರಿಗೆ ಇಲಾಖೆಗೆ ಆದೇಶಿಸಿದೆ.
ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಗೆ ಸೇರಿದ ಚರ ಮತ್ತು ಸ್ಥಿರಾಸ್ತಿಯ ಕುರಿತು ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಕ್ಕೆ ಹೈಕೋರ್ಟ್ ಆದೇಶಿಸಿರುವುದಾಗಿ ಅರ್ಜಿದಾರ ವಕೀಲರು ಎಎನ್ಐಗೆ ತಿಳಿಸಿದ್ದಾರೆ.
ರಾಮ್ ರಹೀಂ ಸಿಂಗ್ ಜೈಲು ಪಾಲಾದ ನಂತರ ಸಿರ್ಸಾದ ಡೇರಾ ಸಚ್ಚಾ ಸೌದಾ ಆಶ್ರಮದಿಂದ ಯಾವುದೇ ಚರಾಸ್ತಿಯನ್ನು ಸ್ಥಳಾಂತರಿಸಿರುವ ಬಗ್ಗೆಯೂ ಪರಿಶೀಲನೆ ನಡೆಸುವಂತೆ ಹೈಕೋರ್ಟ್ ಹರಿಯಾಣ ಸರ್ಕಾರಕ್ಕೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com