ಪಾಕ್ ಉದ್ಧಟತನಕ್ಕೆ ಸೇನೆಯಿಂದ ಪಾಠ: ಸರ್ಜಿಕಲ್ ದಾಳಿಗೆ ಒಂದು ವರ್ಷ

ಉಗ್ರರನ್ನು ಸದೆಬಡಿಯುವ ಸಲುವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಭಾರತೀಯ ಯೋಧರು ರಾತ್ರೋರಾತ್ರಿ ನಡೆಸಿದ್ದ ಸರ್ಜಿಕಲ್ ದಾಳಿಗೆ ಸೆ.29ಕ್ಕೆ ಒಂದು ವರ್ಷ ತುಂಬಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಉಗ್ರರನ್ನು ಸದೆಬಡಿಯುವ ಸಲುವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಭಾರತೀಯ ಯೋಧರು ರಾತ್ರೋರಾತ್ರಿ ನಡೆಸಿದ್ದ ಸರ್ಜಿಕಲ್ ದಾಳಿಗೆ ಸೆ.29ಕ್ಕೆ ಒಂದು ವರ್ಷ ತುಂಬಿದೆ. 
2016ರ ಸೆ.18ರಂದು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕರು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆಸಿ 19 ಯೋಧರನ್ನು ಹತ್ಯೆ ಮಾಡಿತ್ತು. ಅಲ್ಲದೆ, ಗಡಿಯಲ್ಲಿ ಉಗ್ರರ ಒಳನುಸುಳುವಿಕೆ ಮಿತಿ ಮೀರಿತ್ತು. ಗಡಿ ನಿಯಂತ್ರಣ ರೇಖೆಯ ಬಳಿ ಭಾರೀ ಪ್ರಮಾಣದ ಉಗ್ರರು ಭಾರತದ ಗಡಿಯೊಳಗೆ ನುಗ್ಗಿ ದಾಳಿ ನಡೆಸಲು ಸಜ್ಜಾಗಿದ್ದರು. 

ಈ ಹಿನ್ನಲೆಯಲ್ಲಿ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಮತ್ತು ಉರಿ ಸೇನಾ ನೆಲೆ ಮೇಲಿನ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿಯಲ್ಲಿರುವ ಉಗ್ರರ ನೆಲೆಗಳ ಮೇಲೆ 2016 ಸೆ.29 ರಂದು ಸೀಮಿತ ದಾಳಿಯನ್ನು ನಡೆಸಿತ್ತು. 
ಸೀಮಿತ ದಾಳಿ ಭಾರತೀಯ ಸೇನೆಯ ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿತ್ತು. ಭಾರತದ ಸೀಮಿತ ದಾಳಿಕೆ ಅಮೆರಿಕ, ರಷ್ಯಾ ಸೇರಿದಂತೆ ಯಾವ ದೇಶವೂ ಆಕ್ಷೇಪ ವ್ಯಕ್ತಪಡಿಸಲ್ಲ. ಭಯೋತ್ಪಾದನೆಯನ್ನು ಮಟ್ಟ ಹಾಕುವಲ್ಲಿ ವಿಫಲವಾದ ಪಾಕಿಸ್ತಾನ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ತೀವ್ರ ಮುಖಭಂಗವನ್ನು ಅನುಭವಿಸಿತ್ತು. ಭಾರತೀಯ ಸೇನೆಯ ಸಾಹಸಕ್ಕೆ ದೇಶ ಸೇರಿದಂತೆ ವಿಶ್ವದಾದ್ಯಂತ ವ್ಯಾಪಕ ಪ್ರಶಂಸೆ ಹಾಗೂ ಅಚ್ಚರಿಗಳು ವ್ಯಕ್ತವಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com